ಎಸ್ಸೆಸ್ಸೆಫ್ ಇಲಲ್ ಹಬೀಬ್, ಎಸ್‌ವೈಎಸ್ ಟೀಂ ಇಸಾಬಾ ಮೀಲಾದ್ ಜಾಥಾ
Update: 2018-12-03 18:11 IST
ಮಂಗಳೂರು, ಡಿ.3: ಅನಿವಾಸಿ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕೆಸಿಎಫ್-ಎಸ್ಸೆಸ್ಸೆಫ್-ಎಸ್‌ವೈಎಸ್ ವತಿಯಿಂದ ಸೋಮವಾರ ನಗರದಲ್ಲಿ ನಡೆದ ‘ಕನೆಕ್ಟ್ - 2018 ಸಾಮುದಾಯಿಕ ಸಮ್ಮಿಲನ’ ಕಾರ್ಯಕ್ರಮದಲ್ಲಿ ಜ್ಯೋತಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಆಕರ್ಷಕ ಮೀಲಾದ್ ಜಾಥಾ ನಡೆಯಿತು.
ಎಸ್ಸೆಸ್ಸೆಫ್ ಇಲಲ್ ಹಬೀಬ್ ಮತ್ತು ಎಸ್‌ವೈಎಸ್ ಟೀಂ ಇಸಾಬಾ ವತಿಯಿಂದ ನಡೆದ ಜಾಥಾಕ್ಕೆ ಎಸ್‌ವೈಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಜಿಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಪಿ.ಎ. ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ, ಕನೆಕ್ಟ್ ಈ ಟೀಂ ಸಂಚಾಲಕ ಹಾಫಿಳ್ ಯಾಕೂಬ್ ಸಅದಿ ನಾವೂರು ಮತ್ತಿತರರು ನೇತೃತ್ವ ನೀಡಿದ್ದರು.