ಬಜ್ಪೆ: ನೂತನ ಹೈಮಾಸ್ ದೀಪ ಉದ್ಘಾಟನೆ
Update: 2018-12-03 18:39 IST
ಮಂಗಳೂರು, ಡಿ.3: ಬಜ್ಪೆ ಸೌಹಾರ್ದ ನಗರದ ಮಸ್ಜಿದ್ ರ್ರಹ್ಮಾನ್ ಜುಮಾ ಮಸ್ಜಿದ್ ಆವರಣದಲ್ಲಿ ನೂತನ ಹೈಮಾಸ್ ದೀಪವನ್ನು ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ ಉದ್ಘಾಟಿಸಿದರು.
ಮುಖ್ಯಅತಿಥಿಯಾಗಿ ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯ ಸುವರ್ಣ, ಸದಸ್ಯರಾದ ಎಂ.ಕೆ. ಅಶ್ರಫ್ ಹಾಗೂ ಸುಮತಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಸ್ಜಿದ್ ರ್ರಹ್ಮಾನ್ ಅಧ್ಯಕ್ಷ ಎ.ಮಯ್ಯದ್ದಿ, ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನವಾಝ್, ಖತೀಬರಾದ ಯೂಸುಫ್ ಸಖಾಫಿ ಉಪಸ್ಥಿತರಿದ್ದರು.