ಕರವೇ ಉಡುಪಿ ಜಿಲ್ಲಾಧ್ಯಕ್ಷರಾಗಿ ಸುಶೀಲ್ ಹೆಗ್ಡೆ
ಉಡುಪಿ, ಡಿ.3: ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಸುಶೀಲ್ ಸಿ.ಹೆಗ್ಡೆ ಅವರನ್ನು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ನೇಮಕ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ಪರ ಚಿಂತೆನಗಳನ್ನು ಅಭಿವೃದ್ಧಿ ಪಡಿಸುವಂತಹ ಹಲವು ಜನಪರ ಕಾರ್ಯ ವನ್ನು ಮುಂದುವರಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸುದೇಶ್ ಶೇಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
2018ರ ಎ.25ರಂದು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ನೀಡಿದ ತೀರ್ಪಿನಂತೆ ನಾರಾಯಣ ಗೌಡರ ನೇತೃತ್ವದ ಕರವೇ ಅಧಿಕೃತ ಸಂಘಟನೆ ಯಾಗಿದ್ದು, ಆದುದರಿಂದ ಅನಧಿಕೃತವಾಗಿ ಕರವೇ ಶಿರ್ಷೀಕೆ ಹಾಗೂ ಲಾಂಛನ ವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಆದೇಶದಲ್ಲಿ ತಿಳಿಸಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಸುಶೀಲ್ ಹೆಗ್ಡೆ, ಉಪಾಧ್ಯಕ, ಸುದರ್ಶನ್ ಪೂಜಾರಿ, ಮುರಳಿ, ಉಡುಪಿ ತಾಲೂಕು ಅಧ್ಯಕ್ಷ ಗುರುರಾಜ್, ಕಾರ್ಮಿಕ ಅಧ್ಯಕ್ಷ ರಾಜನ್ ಉಪಸ್ಥಿತರಿದ್ದರು.