ಪ್ರಧಾನಿ ನಿವಾಸದ ಮುಂದೆ ದಂಗೆ ಪ್ರಕರಣದಲ್ಲಿ ಕೇಜ್ರಿವಾಲ್ ಖುಲಾಸೆ

Update: 2018-12-03 14:14 GMT

ಹೊಸದಿಲ್ಲಿ,ಡಿ.3: 2012ರಲ್ಲಿ ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರ ನಿವಾಸದ ಎದುರು ನಡೆದಿದ್ದ ದಂಗೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರನ್ನು ಇಲ್ಲಿಯ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಕೇಜ್ರಿವಾಲ್ ಅವರು ರಾಷ್ಟ್ರ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ವೇದಿಕೆಯಾಗಿದ್ದ ‘ಇಂಡಿಯಾ ಅಗೇನ್‌ಸ್ಟ್’ ಕರಪ್ಶನ್‌ನ ಸ್ವಯಂಸೇವಕರು 2012,ಆ.26ರಂದು ಕಲ್ಲಿದ್ದಲು ಹಗರಣದ ವಿರುದ್ಧ ಆಗಿನ ಪ್ರಧಾನಿ ಸಿಂಗ್ ನಿವಾಸದೆದುರು ಪ್ರತಿಭಟನೆಯನ್ನು ನಡೆಸಿದ್ದರು. ಪ್ರತಿಭಟನಾಕಾರರು ಹಿಂಸೆಗಿಳಿದಾಗ ಅವರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದ್ದ ಪೊಲೀಸರು,ಬಳಿಕ ಕೆಲವರು ದೊಣ್ಣೆಗಳಿಂದ ತಮ್ಮ ಮೇಲೆ ಹಲ್ಲೆ ನಡೆಸಿದಾಗ ಅಶ್ರುವಾಯುವನ್ನೂ ಪ್ರಯೋಗಿಸಿದ್ದರು. ಪೊಲೀಸ್ ಬ್ಯಾರಿಕೇಡ್‌ಗಳನ್ನೂ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದರು.

ಈ ಸಂಬಂಧ ಕೇಜ್ರಿವಾಲ್ ಮತ್ತು ಇತರ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News