×
Ad

ಕಟ್ಟಿಂಗೇರಿ: ಸಾಧಕರಿಗೆ ‘ಕೆ.ಕೆ.ಹೆಬ್ಬಾರ್ ಹುಟ್ಟೂರ ಪ್ರಶಸ್ತಿ’ ಪ್ರದಾನ

Update: 2018-12-03 20:23 IST

ಶಿರ್ವ, ಡಿ.3: ಮೂಡುಬೆಳ್ಳೆ ಎಡ್ಮೇರು ನಿಸರ್ಗ ಯುವಕ ಮಂಡಲದ 17ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ರೇಖಾಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್ ಸ್ಮರಣಾರ್ಥ ನೀಡುವ ಕೆ.ಕೆ.ಹೆಬ್ಬಾರ್ ಹುಟ್ಟೂರ ಪ್ರಶಸ್ತಿಯನ್ನು ಕವಿ ಮುದ್ದು ಮೂಡುಬೆಳ್ಳೆ, ಚಿತ್ರ ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ, ದೈವನರ್ತಕ ಸುಧಾಕರ ಪಾಣಾರರಿಗೆ ರವಿವಾರ ಪ್ರದಾನ ಮಾಡಲಾಯಿತು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಉದ್ಘಾಟಿಸಿ ದರು. ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜಿನಿ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ವಿವೇಕಾನಂದ ಶೆಟ್ಟಿ ಶಾಲಾ ವಾರ್ಷಿಕೋತ್ಸವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಕೆ.ಕೆ. ಹೆಬ್ಬಾರ್ ಅವರಿಗೆ ಅಶ್ವಿನ್ ನುಡಿ ನಮನ ಸಲ್ಲಿಸಿದರು.

ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಉದ್ಯಮಿ ಯಶ್‌ಪಾಲ್ ಸುವರ್ಣ ಶುಭಾಶಂಸನೆಗೈದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಪಂ ಸದಸ್ಯೆ ಸುಜಾತಾ ಸುವರ್ಣ, ಮೂಡುಬೆಳ್ಳೆ ಗ್ರಾಪಂ ಸದಸ್ಯ ಬೆಳ್ಳೆ ಶಿವಾಜಿ ಸುವರ್ಣ, ಗುರುರಾಜ ಭಟ್, ಎಡ್ಮೇರು ಶಾಲೆಯ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ, ಯುವಕ ಮಂಡಲದ ಗೌರವಾಧ್ಯಕ್ಷ ಎಡ್ಮೇರ್ ನಾಗೇಶ್ ನಾಯಕ್ ಉಪಸ್ಥಿತರಿದ್ದರು.

ನಿಸರ್ಗ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ನಾಯಕ್ ಸ್ವಾಗತಿಸಿ ದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯರ್ಶಿ ಶ್ರೀಕಾಂತ್ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News