ಎಕ್ಸಲೆಂಟ್ ಮೂಡುಬಿದಿರೆ: ವಿದ್ಯಾರ್ಥಿನಿ ನಿಲಯ ಉದ್ಘಾಟನೆ

Update: 2018-12-03 15:20 GMT

ಮೂಡುಬಿದಿರೆ, ಡಿ. 3: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕಲ್ಲಬೆಟ್ಟು, ಮೂಡಬಿದಿರೆ ಇಲ್ಲಿ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಲಾದ ನೂತನ ವಸತಿ ನಿಲಯ “ಪದ್ಮಾವತಿ”ಯ ಉದ್ಘಾಟನೆಯನ್ನು  ಧರ್ಮಸ್ಥಳ ಶ್ರೀ ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಿದರು.

ಆ ಬಳಿಕ ಮಾತನಾಡಿದ ಅವರು ಭವಿಷ್ಯತ್ತನ್ನು ಕಟ್ಟುವ ವಿದ್ಯಾರ್ಥಿಗಳಲ್ಲಿ ಛಲ, ಶಿಸ್ತು, ಶ್ರದ್ಧೆಯನ್ನು ಹೊಂದಿದರೆ ಜೀವನದಲ್ಲಿ ಮಹತ್ತಾದ ಸಾಧನೆ ಮಾಡಲು ಸಾಧ್ಯ. ಸಿಕ್ಕಿರುವ ಅವಕಾಸವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಸಿಂಹನಗದ್ದೆ ಸರಸಿಂಹರಾಜಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರು ಆಶೀರ್ವಚನ ನೀಡಿ ವಿದ್ಯಾರ್ಥಿಯಾದವನ ವಿದ್ಯೆಯನ್ನು ಕಠಿನ ವೃತದಂತೆ ಅಧ್ಯಯನ ಮಾಡಬೇಕು ಬೆನ್ನಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ವಿದ್ಯಾರ್ಥಿಗಳು ಉತ್ತಮ ಚಾರಿತ್ರ್ಯವಂತರಾಗಲಿ ಎಂದು ಆಶೀರ್ವದಿಸಿದರು.

ಯಶಸ್ಸು ಬೇಕಾದರೆ ತೀರ್ವವಾದ ಬಯಕೆ, ಉತ್ಕಟ ಇಚ್ಚೆಯಿಂದ, ಪ್ರೀತಿಯಿಂದ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಳದಂಗಡಿಯ ಅರಸರ್ರದ ಶ್ರೀಯುತ ಪದ್ಮಪ್ರಸಾದ ಅಜಿಲರು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಬಿದಿರೆ ಕ್ಶೇತ್ರದ ಮಾಜಿ ಶಾಸಕ ಶ್ರೀ ಅಭಯಚಂದ್ರ ಜೈನ್ ರವರು ಮಾತನಾಡಿ ವಿದ್ಯೆ ವಿನಯವನ್ನು ಕಲಿಸಿ ಸಂಸ್ಕಾರವಂತ ನಾಗರಿಕರನ್ನು ತಯಾರುಮಾಡುವಂತಾಗಲಿ ಎಂದು ಹಾರೈಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಜೈನ್ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News