ಕೋಳಿ ಅಂಕ: ಮೂವರ ಬಂಧನ

Update: 2018-12-03 16:34 GMT

ಕಾರ್ಕಳ, ಡಿ.3: ಮುಲ್ಲಡ್ಕ ಗ್ರಾಮದ ಮುಂಡ್ಕೂರು ಬ್ರಹ್ಮ ಬೈದರ್ಕಳ ಗರಡಿ ಬಳಿಯ ಗದ್ದೆಯಲ್ಲಿ ಡಿ.2ರಂದು ಸಂಜೆ ವೇಳೆ ಕೋಳಿ ಅಂಕ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮುಂಡ್ಕೂರು ಗ್ರಾಮದ ರಾಮ(49), ನಂದಳಿಕೆಯ ಕರುಣಾಕರ(50), ಸಾಂತೂರು ಗ್ರಾಮದ ವಿಠಲ ಮೂಲ್ಯ(40) ಬಂಧಿತ ಆರೋಪಿಗಳು. ಮುಲ್ಲಡ್ಕ ಗ್ರಾಮದ ಪ್ರದೀಪ್ ಶೆಟ್ಟಿ (40) ಎಂಬವರು ಪರಾರಿಯಾಗಿದ್ದಾರೆ.

ಬಂಧಿತರಿಂದ ಐದು ಕೋಳಿಗಳು, 1,936ರೂ. ನಗದು, ಎರಡು ಬಾಳು ಕತ್ತಿ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News