×
Ad

ತಣ್ಣೀರುಬಾವಿ ಗ್ಯಾಂಗ್‌ರೇಪ್ ಪ್ರಕರಣ: ಕಠಿಣ ಕ್ರಮಕ್ಕೆ ದಸಂಸ ಒತ್ತಾಯ

Update: 2018-12-03 22:14 IST

ಉಡುಪಿ, ಡಿ.3: ದ.ಕ. ಜಿಲ್ಲೆಯ ತಣ್ಣೀರುಬಾವಿ ತೋಟದಬೆಂಗ್ರೆ ಪ್ರದೇಶ ದಲ್ಲಿ ಇತ್ತೀಚೆಗೆ ಮಹಿಳೆಯ ಮೇಲೆ ಕೆಲವು ಸಂಘಟನೆಯ ಕಾರ್ಯಕರ್ತರು ಹಾಗೂ ದುಷ್ಕರ್ಮಿಗಳು ಗ್ಯಾಂಗ್ ರೇಪ್ ನಡೆಸಿ ದೌರ್ಜನ್ಯವೆಸಗಿರುವುದನ್ನು ಕನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಖಂಡಿಸಿದ್ದಾರೆ.

ತೋಟದ ಬೆಂಗ್ರೆ ಪ್ರದೇಶದಲ್ಲಿ ಈಗಾಗಲೇ ಹಲವಾರು ಇಂತಹ ಪ್ರಕರಣ ಗಳು ನಡೆದಿದ್ದರೂ ಆರೋಪಿಗಳೊಂದಿಗೆ ಪೊಲೀಸ್ ಇಲಾಖೆ ಕೂಡಾ ಶಾಮೀಲಾ ಗಿರುವ ಬಗ್ಗೆ ಸಂಶಯ ಬರುತ್ತಿದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯರು ದೂರು ನೀಡಲು ಹಿಂಜರಿಯುತ್ತಿರುವುದು ಸ್ಪಷ್ಟವಾಗಿದೆ. ರಾಜ್ಯ ಗೃಹ ಸಚಿವರು ಆರೋಪಿಗಳಿಗೆ ಯಾವುದೇ ರೀತಿಯ ಜಾಮೀನು ಸಿಗದಂತೆ ಇದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಅಲ್ಲದೇ ಸಂತ್ರಸ್ತ ಮಹಿಳೆಗೆ ರೂ. 25 ಲಕ್ಷ ಪರಿಹಾರ ಮತ್ತು ಸರಕಾರಿ ಉದ್ಯೋಗ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್, ತಾಲೂಕು ಸಂಚಾಲಕ ಪರಮೇಶ್ವರ ಉಪ್ಪೂರು, ಜಿಲ್ಲಾ ಸಂಚಾಲಕ ಎಸ್.ಎಸ್. ಪ್ರಸಾದ್, ದಲಿತ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಲೋಕೇಶ್ ಪಡುಬಿದ್ರಿ, ಗೋಪಾಲಕೃಷ್ಣ ಕುಂದಾಪುರ, ಹೂವಪ್ಪ ಮಾಸ್ತರ್, ದಲಿತ ಚಿಂತಕ ನಾರಾಯಣ ಮಣೂರು, ವಿಜಯಕುಮಾರ್ ತಲ್ಲೂರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News