ಡಿ.9: ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಸಂಗೀತ ನೃತ್ಯೋತ್ಸವ
Update: 2018-12-03 22:16 IST
ಉಡುಪಿ, ಡಿ.3: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಪರ್ಯಾಯ ಪಲಿಮಾರು ಮಠದ ಸಹಯೋಗದೊಂದಿಗೆ ಡಿ.9ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ‘ಸಂಗೀತ ನೃತ್ಯೋತ್ಸವ- 2018’ ನ್ನು ಆಯೋಜಿಸಿದೆ.
ಬೆಳಗ್ಗೆ 9:30ರಿಂದ ರಾತ್ರಿ 8:30ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀಗಳ ಆಶೀರ್ವಚನ, ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ರ ಗೌರವ ಉಪಸ್ಥಿತಿಯಿದೆ. ಅಕಾಡೆಮಿಯ ಅಧ್ಯಕ್ಷ ೈಯಾ್ ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಇದರಲ್ಲಿ ಊರ ಹಾಗೂ ಪರ ಊರಿನ ಶ್ರೇಷ್ಠ ಕಲಾವಿದರಿಂದ ನಾಗಸ್ವರ, ಗಮಕ, ಕರ್ನಾಟಕ ಸಂಗೀತ, ಲಯತರಂಗ, ಭಾವಲಹರಿ, ಭಕ್ತಿಗೀತ, ಹರಿಕಥೆ, ಹಿಂದೂಸ್ಥಾನಿ ಗಾಯನ ಮತ್ತು ವಾದನ ಹಾಗೂ ವಿವಿಧ ತಂಡಗಳಿಂದ ನೃತ್ಯ ಲಾಸ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸ್ಥಳೀಯ ಸದಸ್ಯ ಸಂಚಾಲಕ ಪ್ರೊ. ವಿ. ಅರವಿಂದ ಹೆಬ್ಬಾರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.