ಡಿ. 5: ದೇರಳಕಟ್ಟೆಯಲ್ಲಿ ಶರೀಅತ್ ಸಂರಕ್ಷಣಾ ಪ್ರಚಾರ ಸಮ್ಮೇಳನ

Update: 2018-12-04 06:11 GMT

ದೇರಳಕಟ್ಟೆ, ಡಿ. 4: ಸಮಸ್ತ ಶರೀಅತ್ ಸಂರಕ್ಷಣಾ ಸಮಾವೇಶ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿ ದೇರಳಕಟ್ಟೆ ರೇಂಜ್ ಇದರ ಆಶ್ರಯದಲ್ಲಿ ಡಿ. 5ರಂದು ಸಂಜೆ ದೇರಳಕಟ್ಟೆ ಸಿಟಿಗ್ರೌಂಡಿನಲ್ಲಿ ಶರೀಅತ್ ಸಂರಕ್ಷಣಾ ಸಮಾವೇಶ ಪ್ರಚಾರ ಸಮ್ಮೇಳನ ನಡೆಯಲಿದೆ.

ಸಮ್ಮೇಳನದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮದ್ ಮುಸ್ಲಿಯಾರ್  ವಹಿಸಲಿದ್ದು, ಸಯ್ಯದ್ ಅಮೀರ್ ತಂಙಳ್ ಕಿನ್ಯಾ ದುಆ ನೆರವೇರಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಯ್ಯದ್ ಇಬ್ರಾಹಿಮ್ ಬಾತಿಷಾ ತಂಙಳ್, ಬಂಬ್ರಾಣ ಉಸ್ತಾದ್, ಇಬ್ರಾಹಿಮ್ ಬಾಖವಿ ಕೆ.ಸಿ.ರೋಡ್, ಎಸ್.ಬಿ.ದಾರಿಮಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸ್ವದಕತುಲ್ಲಾ ಫೈಝಿ, ಉಸ್ಮಾನ್ ಫೈಝಿ, ಕಾಸಿಮ್ ದಾರಿಮಿ, ಹಾರೂನ್ ಅಹ್ಸನಿ, ಕೆ.ಆರ್ ಹುಸೈನ್ ದಾರಿಮಿ, ಐ.ಮೊಯ್ದಿನಬ್ಬ ಹಾಜಿ, ಎಮ್.ಟಿ. ಮಹಮ್ಮದ್ ಮೋನ್, ಉಳ್ಳಾಲ ರಶೀದ್ ಹಾಜಿ, ಅಬ್ದುಲ್ ರಝಾಕ್ ಬಂಟ್ವಾಳ ಮುಂತಾದ ಗಣ್ಯ ನಾಯಕರ ಗೌರವ  ಉಪಸ್ಥಿತಿಕೆಯಲ್ಲಿ ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ಮುಹಮ್ಮದ್ ಕುಟ್ಟಿ ನಿಝಾಮಿ ವಯನಾಡ್ ಮಾಡಲಿರುವರು.

ಸ್ಥಳೀಯ ಖತೀಬ್ ಶರೀಫ್ ಅರ್ಶದಿ ಪ್ರಾಸ್ತಾವಿಕ ಮಾತನಾಡಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಇನ್ನಿತರ ಉಲಮಾ ಹಾಗೂ ಉಮರಾ ನೇತಾರರು ಭಾಗವಹಿಸಲಿರುವರೆಂದು ಶರೀಅತ್ ಸಂರಕ್ಷಣಾ  ಸಮಾವೇಶ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಕಾರಿ ಸಂಚಾಲಕ ಹಾಗೂ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News