ವೈಎಂಸಿಎ ರಾಷ್ಟ್ರೀಯ ಖಜಾಂಚಿಯಾಗಿ ಆರ್.ಎಸ್.ಶೆಟ್ಟಿಯಾನ್ ಪುನರಾಯ್ಕೆ
Update: 2018-12-04 20:07 IST
ಮಂಗಳೂರು, ಡಿ.4: ನಗರದ ಫಳ್ನೀರ್ ರಸ್ತೆಯಲ್ಲಿರುವ ಅಥೆನಾ ಆಸ್ಪತ್ರೆಯ ಚೇರ್‌ಮೇನ್ ಮತ್ತು ಆಡಳಿತ ನಿರ್ದೇಶಕ ಆರ್.ಎಸ್. ಶೆಟ್ಟಿಯಾನ್ ವೈಎಂಸಿಎ (ಯಂಗ್ ಮೆನ್ ಕ್ರಿಶ್ಚಿಯನ್ ಎಸೋಸಿಯೇಶನ್) ಇದರ 2018-2021ರ ಸಾಲಿಗಾಗಿ ರಾಷ್ಟ್ರೀಯ ಖಜಾಂಚಿಯಾಗಿ ಪುನರ್ ಆಯ್ಕೆಯಾಗಿದ್ದಾರೆ.
ಕೇರಳದ ಅಡೂರಿನ ಮಾರ್ಥೊಮ ಯೂಥ್ ಸೆಂಟರ್‌ನಲ್ಲಿ ಇತ್ತೀಚೆಗೆ ಜರಗಿದ ವೈಎಂಸಿಎ 35ನೇ ಮಹಾಧಿವೇಶನದಲ್ಲಿ ಮೂರು ವರ್ಷಗಳ ಕಾಲಾವಧಿಗೆ ಅಖಿಲ ಭಾರತ ಮಟ್ಟದ ವೈಎಂಸಿಎ ಖಜಾಂಚಿಯಾಗಿ ಆಯ್ಕೆಯಾಗಿರುವರು.
ವಿಶ್ವದಲ್ಲೇ 6ನೇ ಸ್ಥಾನದಲ್ಲಿರುವ ಎನ್‌ಜಿಒ ಸಂಸ್ಥೆ ವೈಎಂಸಿಎ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾಗಿದ್ದು, ಯುವಕರಿಗೆ ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಿ ವಿಶ್ವದಾದ್ಯಂತ ಪ್ರೋತ್ಸಾಹಿಸುತ್ತಿದೆ.