×
Ad

ಡಿ. 5ರಿಂದ ಸರ್ಕಾರಿ ಬಸ್ ಪ್ರಯಾಣ ಅಗ್ಗ

Update: 2018-12-04 20:29 IST

ಮಂಗಳೂರು, ಡಿ. 4: ಕೆಎಸ್‌ಆರ್‌ಟಿಸಿ ವೋಲ್ವೊ, ರಾಜಹಂಸ, ಎಸಿ, ನಾನ್ ಎಸಿ ಎಲ್ಲ ಬಸ್‌ಗಳ ಪ್ರಯಾಣ ದರ ತಕ್ಷಣದಿಂದಲೇ ಶೇ.10 ರಷ್ಟು ಇಳಿಕೆಯಾಗಲಿದೆ.

ಖಾಸಗಿ ಬಸ್‌ಗಳಿಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಕಳುಹಿಸಿದ ಪ್ರಸ್ತಾವನೆಗೆ ನಿಗಮದ ಕೇಂದ್ರ ಕಚೇರಿ ಒಪ್ಪಿಗೆ ನೀಡಿದ್ದು, ಇಡೀ ರಾಜ್ಯಕ್ಕೆ ಅನ್ವಯಿಸಿ ಡಿ.5ರಿಂದಲೇ ಜಾರಿಗೊಳಿಸುವಂತೆ ನಿರ್ದೇಶನ ನೀಡಿದೆ.

ಜನದಟ್ಟಣೆಯ ಅವಧಿ ಡಿ. 21 ರಿಂದ ಜ.15 ತನಕ ಮತ್ತೆ ಹಿಂದಿನ ದರವೇ (ಅಂದರೆ ಈಗ ಇರುವ ದರವೇ) ಮುಂದುವರಿಯಲಿದ್ದು, ಜ.16 ರಿಂದ ಮತ್ತೆ ಇಳಿಕೆಯಾಗಲಿದೆ.

ಸಾಮಾನ್ಯವಾಗಿ ವರ್ಷಂಪ್ರತಿ ಜನಸಂಚಾರ ಕಡಿಮೆ ಇರುವ ಜ.15 ಬಳಿಕ ನಿರ್ದಿಷ್ಟ ದಿನಗಳ ತನಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ದರ ಕಡಿಮೆ ಮಾಡಲಾಗುತ್ತದೆ. ಏಕೆಂದರೆ ಮಕ್ಕಳ ಪರೀಕ್ಷೆಗಳು ನಡೆಯುವ ಈ ಸಂದರ್ಭ ದೂರದ ಊರುಗಳಿಗೆ ಬಸ್ ಪ್ರಯಾಣ ನಡೆಸುವವರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಈ ವರ್ಷ ಅವಧಿ ಮುಂಚಿತವಾಗಿಯೇ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಪರಿಷ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News