×
Ad

ಉದ್ಯಾವರ ಚರ್ಚ್ನ ಪರಮ ಪ್ರಸಾದದ ಮೆರವಣಿಗೆ

Update: 2018-12-04 20:36 IST

ಉಡುಪಿ, ಡಿ.4: ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯ ದಲ್ಲಿ ವಾರ್ಷಿಕ ಮಹೋತ್ಸವದ ಪೂರ್ವಭಾವಿಯಾಗಿ ಸಹೋದರತ್ವದ ದಿನ, ಪರಮ ಪ್ರಸಾದದ ಭವ್ಯ ಮೆರವಣಿಗೆ ಮತ್ತು ದಿವ್ಯ ಬಲಿಪೂಜೆಯು ರವಿವಾರ ನಡೆಯಿತು.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಕ್ಯಾಂಪಸ್‌ನ ನಿರ್ದೇಶಕ, ಕೊಳಲಗಿರಿ ದೇವಾಲಯದ ಧರ್ಮಗುರು ವಂ.ಫಾ.ಪ್ರಕಾಶ್ ಅನಿಲ್ ಕಾಸ್ತೆಲಿನೋ ಆಶೀ ರ್ವಚನ ನೀಡಿ, ನಾವೆಲ್ಲರು ಯೇಸುವಿನ ಸೇವಕರಾಗಬೇಕು. ಯೇಸುವಿನ ಬೋಧನೆಯಂತೆ ಇತರರನ್ನು ಕ್ಷಮಿಸಿ, ಅವರ ವಾಕ್ಯದಂತೆ ನಡೆಯಬೇಕು. ಸತತವಾಗಿ ಸೋಲುವರಿಗೆ ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖಿತರಾದವ ರನ್ನು ದೇವರು ಹೆಚ್ಚು ಪ್ರೀತಿಸುತ್ತಾರೆ. ದೇವರ ಆಶೀರ್ವಾದದಿಂದ ನಾವೆಲ್ಲ ಸಮುದಾಯವನ್ನು ಕಟ್ಟಬೇಕು ಎಂದರು.

ದಿವ್ಯ ಬಲಿಪೂಜೆಯ ಬಳಿಕ ಉದ್ಯಾವರ ದೇವಾಲಯದ ಪರಿಸರದಲ್ಲಿ ಪರಮ ಪ್ರಸಾದದ ಭಕ್ತಿಯ ಮೆರವಣಿಗೆ ನಡೆಯಿತು. ಉಡುಪಿ ಕ್ರೆಸ್ತ ಧರ್ಮ ಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ದೇವಾಲಯದ ಪ್ರಧಾನ ಧರ್ಮಗುರು ವಂ.ಫಾ.ಸ್ಟ್ಯಾನಿ ಬಿ.ಲೋಬೊ, ಧರ್ಮಪ್ರಾಂತ್ಯದ ಎಸ್ಟೇಟ್ ನಿರ್ದೇಶಕ ವಂ. ಫಾ.ಹೆನ್ರಿ ಮಸ್ಕರೇನಸ್, ಸಹಾಯಕ ಧರ್ಮಗುರು ಫಾ.ರಾಲ್ವಿನ್, ದಿಯಾಕಾನ್ ಸ್ಟೀವ್ ಫೆರ್ನಾಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News