ಎಸ್ಸೆಸ್ಸೆಫ್ ಸಾಸ್ತಾನ, ರಂಗನಕೆರೆ ಶಾಖೆ ಮಹಾಸಭೆ

Update: 2018-12-04 15:08 GMT

ಬ್ರಹ್ಮಾವರ, ಡಿ.4: ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ವ್ಯಾಪ್ತಿಯ ಸಾಸ್ತಾನ ಶಾಖೆಯ ಮಹಾಸಭೆ ಹಾಗು ನೂತನ ಸಮಿತಿ ರಚನೆಯು ಸಾಸ್ತಾನ ಮದ್ರಸ ಹಾಲ್ನಲ್ಲಿ ಇತ್ತೀಚೆಗೆ ನಡೆಯಿತು.

ಸಾಸ್ತಾನ ಮಸೀದಿಯ ಖತೀಬ್ ಬಿ.ಎ.ಮಹಮ್ಮದಾಲಿ ಸಹದಿ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ರಮೀಝ್ ಅಧ್ಯಕ್ಷತೆ ವಹಿಸಿದ್ದರು. ವೀಕ್ಷಕರಾಗಿ ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ಸಂಘಟನಾ ಮಾಹಿತಿ ನೀಡಿದರು. ಸೆಕ್ಟರ್ ಚುನಾವಣಾಧಿಕಾರಿಯಾಗಿ ನಝೀರ್ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿ ರಝಾಕ್ ಸ್ವಾಗತಿಸಿ, ವಾರ್ಷಿಕ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.

ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಹಮ್ಮದಾಲಿ ಸಹದಿ ಬರುವ, ಅಧ್ಯಕ್ಷರಾಗಿ ಪಿರೋಝ್ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಫ್ವಾನ್, ಕೋಶಾಧಿಕಾರಿಯಾಗಿ ಅಫ್ತಾಬ್, ಉಪಾಧ್ಯಕ್ಷರಾಗಿ ನಾಸೀರ್, ಸಫದ್, ಜೊತೆ ಕಾರ್ಯದರ್ಶಿಯಾಗಿ ಅದ್ನಾನ್, ಮುಸ್ತಫಾ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮಹಮ್ಮದ್ ಮಾಸೂಕ್, ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ಫಿರೋಝ್, ರಶೀದ್, ಸಪ್ವಾನ್, ಸಫಾದ್, ಅಪ್ತಾಬ್, ಅದ್ನಾನ್ ಅವರನ್ನು ಆರಿಸಲಾಯಿತು.

ರಂಗನಕೆರೆ ಶಾಖೆ

ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ವ್ಯಾಪ್ತಿಯ ರಂಗನಕೆರೆ ಶಾಖೆಯ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ರಂಗನಕೆರೆ ಮದ್ರಸ ಹಾಲ್ನಲ್ಲಿ ನಡೆಯಿತು.

ಮಸೀದಿಯ ಖತೀಬ್ ಶರ್ವಾನಿ ರಝ್ವಿ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ಶಂಶುದ್ದೀನ್ ಅಧ್ಯಕ್ಷತೆ ವಹಿಸಿದ್ದದರು. ವೀಕ್ಷಕರಾಗಿ ಸೆಕ್ಟರ್ ಕಾರ್ಯ ದರ್ಶಿ ನಾಸೀರ್ ಬಿ.ಕೆ. ಸಂಘಟನಾ ಮಾಹಿತಿ ನೀಡಿದರು. ಸೆಕ್ಟರ್ ಚುನಾವಣಾ ಧಿಕಾರಿಯಾಗಿ ನಝೀರ್ ಆಗಮಿಸಿದರು. ಶಾಖಾ ಉಪಾಧ್ಯಕ್ಷ ಇಬ್ರಾಹಿಂ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮುತ್ತಲಿಬ್ ವಾರ್ಷಿಕ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.

ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಧ್ಯಕ್ಷರಾಗಿ ಉಮರುಲ್ ಫಾರೂಕ್, ಅಧ್ಯಕ್ಷರಾಗಿ ಅಬ್ದುಲ್ ಮುತ್ತಲಿಬ್, ಪ್ರಧಾನ ಕಾರ್ಯದರ್ಶಿ ಯಾಗಿ ರಿಯಾಝ್, ಕೋಶಾಧಿಕಾರಿಯಾಗಿ ಅನ್ವರ್, ಉಪಾ ಧ್ಯಕ್ಷರಾಗಿ ಸುಲೈಮಾನ್, ಶಿಯಾಬ್, ಜೊತೆ ಕಾರ್ಯದರ್ಶಿಯಾಗಿ ಸಫ್ವಾನ್, ಸಿರಾಜ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಿಯಾಬುದ್ದೀನ್, ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ಶರ್ವಾನಿ ರಝ್ವಿ, ಶಂಶುದ್ದೀನ್, ಮುತ್ತಲಿಬ್, ರಿಯಾಝ್, ಅಬ್ದುರ್ರಹ್ಮಾನ್, ಸುಲೈಮಾನ್, ಸಿರಾಜ್, ಇರ್ಫಾನ್, ಅನ್ವರ್, ಫಯಾಝ್ ಬಾರ್ಕೂರು ಅವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News