×
Ad

ನಂದರಬೆಟ್ಟು ದಫ್ ಸ್ಪರ್ಧೆ : ಪರ್ಲಡ್ಕ ತಂಡಕ್ಕೆ ಪ್ರಶಸ್ತಿ

Update: 2018-12-04 20:50 IST

ವಿಟ್ಲ, ಡಿ. 4 : ಬಿ.ಸಿ.ರೋಡು ಸಮೀಪದ ನಂದರಬೆಟ್ಟು ಇರ್ಫಾದುಲ್ ಮಸಾಕೀನ್ ಎಸೋಸಿಯೇಶನ್ ಹಾಗೂ ನಂದರಬೆಟ್ಟು  ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಇದರ 4ನೇ ವರ್ಷದ ಮೀಲಾದ್ ಸಂಭ್ರಮ ‘ಮಿಲಾದ್ ಫೆಸ್ಟ್-2018’ ಪ್ರಯುಕ್ತ ರವಿವಾರ ರಾತ್ರಿ ನಡೆದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಪುತ್ತೂರು-ಪರ್ಲಡ್ಕದ ಹಯಾತುಲ್ ಇಸ್ಲಾಂ ದಫ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಬಿ.ಸಿ.ರೋಡು-ಕೈಕಂಬದ ರಿಫಾಯಿಯಾ ದಫ್ ತಂಡ ದ್ವಿತೀಯ ಹಾಗೂ ಶಿರ್ವ-ಮಂಚಕಲ್ ಅಲ್-ಅಮೀನ್ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾರ್ಯಕ್ರಮವನ್ನು ಮದೀನಾ ಮಸೀದಿ ಇದರ ಇಮಾಮ್ ಇಸ್ಮಾಯಿಲ್ ಮದನಿ ಉದ್ಘಾಟಿಸಿದರು. ಮಿತ್ತಬೈಲು ಖತೀಬ್ ಹಾಜಿ ಎಂ.ವೈ. ಅಶ್ರಫ್ ಫೈಝಿ ಕೊಡಗು ದುವಾಶಿರ್ವಚನಗೈದರು. ಪರ್ಲಿಯಾ ಅರಫಾ ಜುಮಾ ಮಸೀದಿ ಖತೀಬ್ ಅಬ್ದುಲ್ ಖಾದರ್ ಅಶ್ಶಾಫೀ ಪ್ರವಾದಿಯವರ ಜೀವನ ಶೈಲಿಯ ಕುರಿತು ಪ್ರಬಾಷಣಗೈದರು . ಇರ್ಫಾದುಲ್ ಮಸಾಕೀನ್ ಅಧ್ಯಕ್ಷ  ಎಸ್.ಎಂ. ಸಮದ್ ಹಾಗು ಎನ್.ಎಸ್.ಸಿ.ಸಿ‌ ಅಧ್ಯಕ್ಷ ನಿಝಾಮ್ ನಂದರಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತುಂಬೆ ಜುಮಾ ಮಸೀದಿ ಖತೀಬ್ ಲತೀಫ್ ಫೈಝಿ, ಬಂಟ್ವಾಳ ಪುರಸಭಾ ಸದಸ್ಯರುಗಳಾದ ಮುಹಮ್ಮದ್ ನಂದರಬೆಟ್ಟು, ಲುಕ್ಮಾನ್ ಬಿ.ಸಿ.ರೋಡು, ಹಸೈನಾರ್ ತಾಳಿಪಡ್ಪು, ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಪರ್ಲಿಯಾ ಅರಫಾ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಉಪಾಧ್ಯಕ್ಷ ಇಬ್ರಾಹಿಂ ಬೋಗೋಡಿ, ನುಸ್ರತ್ ಮಿಲಾದುನ್ನಬೀ ಸಂಘದ ಅಧ್ಯಕ್ಷ ಹಮೀದ್ ಪಲ್ಲ, ಯಂಗ್‍ಮೆನ್ಸ್ ಎಸೋಸಿಯೇಶನ್ ಶಾಂತಿಅಂಗಡಿ ಅಧ್ಯಕ್ಷ ಮನ್ಸೂರ್ ಮಜಲ್, ನೂರಾನಿಯಾ ಎಸೋಸಿಯೇಶನ್ ಅಧ್ಯಕ್ಷ ಬಶೀರ್ ವಿಟ್ಲ, ಅಲ್ ಅಝಾರಿಯಾ ಅಸೋಸಿಯೇಷನ್ ಇದರ ಮಾಜಿ ಅಧ್ಯಕ್ಷರಾದ ಹಸನ್‌ ಅರಫಾ ಜವಾನ್ ಫ್ರೆಂಡ್ಸ್ ಅಧ್ಯಕ್ಷ ರಿಯಾಝ್ , ಪರ್ಲಿಯಾ ಮಿಲಾದ್ ಗ್ರೂಪ್ ಅಧ್ಯಕ್ಷ ಲತೀಫ್ (ಲತ್ತಿ), ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಎನ್.ಎಸ್.ಸಿ.ಸಿ. ಅಧ್ಯಕ್ಷ ನಿಝಾಮ್ ನಂದರಬೆಟ್ಟು, ಪೂರ್ವಾಧ್ಯಕ್ಷ ಶರೀಫ್ ನಂದರಬೆಟ್ಟು, ನಂದರಬೆಟ್ಟು ಮದ್ರಸ ಅಧ್ಯಕ್ಷ ಎನ್. ಮುಹಮ್ಮದ್ ನಂದರಬೆಟ್ಟು, ಉಪಾಧ್ಯಕ್ಷ ಎಸ್.ಎ. ರಝಾಕ್, ತಾಳಿಪಡ್ಪು ಮದ್ರಸ ಅಧ್ಯಕ್ಷ ಸಯ್ಯಿದ್ ಫಳೂಲ್ ತಂಙಳ್, ಶರೀಫ್ ದಾರಿಮಿ, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಂದರಬೆಟ್ಟು ಮದ್ರಸ ಪ್ರಧಾನ ಕಾರ್ಯದರ್ಶಿ ಎನ್. ಮುಹಮ್ಮದ್ ಇಕ್ಬಾಲ್, ನಂದರಬೆಟ್ಟು  ಮದ್ರಸ ಅಧ್ಯಾಪಕ ಅಬ್ಬಾಸ್ ಮುಸ್ಲಿಯಾರ್, ಪ್ರಮುಖರಾದ ಎನ್.ಎಂ. ಇಕ್ಬಾಲ್ ಮೈನ್ಸ್ ,ಸ್ಟಾರ್ ಫರ್ನಿಚರ್ಸ್ ಇದರ ಮಾಲಕರಾದ ಕೆ.ರಶೀದ್, ಅಹ್ಮದ್ ಕುಂಞಿ, ಅಬ್ದುಲ್ ಕಾದರ್ ನಂದರಬೆಟ್ಟು, ಶರೀಫ್ ನಂದರಬೆಟ್ಟು, ಅಹಮ್ಮದ್ ಬಾವ, ಸಗೀರ್ ಚಗ್ಗಿ, ಇಶಾನ್ ಮೊದಲಾದವರು ಉಪಸ್ಥಿತರಿದ್ದರು. ಇರ್ಫಾದುಲ್ ಮಸಾಕೀನ್ ಹಾಗು ಎನ್.ಎಸ್.ಸಿ‌‌.ಸಿ.  ಸದಸ್ಯರು ಉಪಸ್ಥಿತರಿದ್ದರು.

ಸಿದ್ದೀಕ್ ನಂದರಬೆಟ್ಟು ಸ್ವಾಗತಿಸಿ,  ಎನ್ ಹನೀಫ್ ವಂದಿಸಿದರು, ಅಶ್ರಫ್ ಅರಬಿ ಕಲ್ಲಡ್ಕ ಹಾಗೂ ಆರಿಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News