ಇಬ್ಬರು ಸದಸ್ಯರ ಸಿಟ್‌ನಿಂದ ಸಿಖ್ ವಿರೋಧಿ ದಂಗೆಗಳ 186 ಪ್ರಕರಣಗಳ ತನಿಖೆಗೆ ಸುಪ್ರೀಂ ಅಸ್ತು

Update: 2018-12-04 15:20 GMT

ಹೊಸದಿಲ್ಲಿ, ಡಿ.4: ದಿಲ್ಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಸ್.ಎನ್.ಧಿಂಗ್ರಾ ನೇತೃತ್ವದ ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡ(ಸಿಟ್)ವು 1884ರ ಸಿಖ್ ವಿರೋಧಿ ದಂಗೆಗಳಲ್ಲಿ ಮುಕ್ತಾಯ ವರದಿಗಳನ್ನು ಸಲ್ಲಿಸಲಾಗಿದ್ದ 186 ಪ್ರಕರಣಗಳ ತನಿಖೆ ನಡೆಸುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಅನುಮತಿ ನೀಡಿದೆ. ಹಾಲಿ ಐಪಿಎಸ್ ಅಧಿಕಾರಿ ಅಭಿಷೇಕ ದುಲಾರ್ ಅವರು ಸಿಟ್‌ನ ಇನ್ನೋರ್ವ ಸದಸ್ಯರಾಗಿದ್ದಾರೆ.

ಸಿಟ್‌ನ ಮೂರನೇ ಸದಸ್ಯರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ರಾಜದೀಪ ಸಿಂಗ್ ಅವರು ವೈಯಕ್ತಿಕ ಕಾರಣಗಳಿಂದ ತಂಡದಲ್ಲಿ ಮುಂದುವರಿಯಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಜ.11ರ ಆದೇಶವನ್ನು ಪರಿಷ್ಕರಿಸುವ ಮೂಲಕ ನ್ಯಾಎಂ.ಬಿ.ಲೋಕೂರ್ ನೇತೃತ್ವದ ಪೀಠವು ಹಾಲಿ ಇರುವ ಇಬ್ಬರೇ ಸದಸ್ಯರು ತನಿಖೆಗಳನ್ನು ಮುಂದುವರಿಸಲು ಅನುಮತಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News