×
Ad

ಶಾಲೆಗಳಲ್ಲಿ ಗ್ರಾಹಕ ಶಿಕ್ಷಣ ಅಗತ್ಯ: ಶಿವಪ್ರಕಾಶ್

Update: 2018-12-04 20:52 IST

ಬಂಟ್ವಾಳ, ಡಿ. 4: ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಹಾಗೂ ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಮಂಗಳೂರು ಇದರ ಸಹಯೋಗ ದೊಂದಿಗೆ ಜಿಲ್ಲಾಮಟ್ಟದ ವಿದ್ಯಾರ್ಥಿ ಗ್ರಾಹಕ ಶಿಕ್ಷಣ ಶಿಬಿರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೈನಂದಿನ ಜೀವನದ ವಿವಿಧ ಹಂತಗಳಲ್ಲಿ ವ್ಯವಹರಿಸು ವಾಗ ಜಾಗೃತರಾಗಲು ಶಾಲೆಗಳಲ್ಲಿನ ಗ್ರಾಹಕ ಕ್ಲಬ್ ನೆರವಾಗಲಿದೆ. ಆನ್‍ಲೈನ್, ಡಿಜಿಟಲ್ ವ್ಯವಹಾರಗಳ ಈ ಕಾಲ ಘಟ್ಟದಲ್ಲಿ ಗ್ರಾಹಕರಿಗೆ ವಂಚನೆಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಜಾಗೃತರಾಗಬೇಕಾಗಿದೆ ಎಂದರು.

ವ್ಯಕ್ತಿ ಎಷ್ಟೇ ಜಾಗೃತನಾದರೂ ಆತನನ್ನು ವಂಚಿಸುವ ಜಾಲ ವಿಸ್ತರಣೆಯಾಗುತ್ತಲೆ ಇದೆ. ಆದ್ದರಿಂದ ವಿದ್ಯಾರ್ಥಿ ಹಂತದಲ್ಲೇ ಗ್ರಾಹಕರ ಅರಿವಿನ ಬಗ್ಗೆ ಜ್ಞಾನ ಮೂಡಿಸಿದರೆ ಮುಂದಿನ ದಿನಗಳಲಿ ಯಶಸ್ಸು ಕಣಲು ಸಾಧ್ಯವಿದೆ ಎಂದರು. 

ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿ ಬಂದು ಮೂರು ವರ್ಷ ಕಳೆದರೂ ಎಷ್ಟು ಮಂದಿ ಗ್ರಾಹಕರಿಗೆ ಈ ಬಗ್ಗೆ ಅರಿವಿದೆ ಎಂದು ಪ್ರಶ್ನಿಸಿದರು. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಗ್ರಾಹಕ, ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಬೇಕು, ಅವರಲ್ಲಿ ಕೌಶಲ್ಯವನ್ನು ಅಭಿವೃದ್ಧಿ ಪಡಿಸಬೇಕು ಎಂದರು. 

ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದರು. ಲಯನ್ಸ್ ಜಿಲ್ಲಾ ಸಂಚಿಕೆಯ ಸಂಪಾದಕ ದಾಮೋದರ ಬಿ.ಎಂ. ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ವಿಷ್ಣು ಪಿ. ನಾಯಕ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News