ಹೆಜಮಾಡಿಯಲ್ಲಿ ಅಪರಾಧ ತಡೆ ಮಾಸಾಚರಣೆ

Update: 2018-12-04 15:33 GMT

ಪಡುಬಿದ್ರಿ, ಡಿ. 4: ಯುವ ಜನತೆ, ಯುವ ಶಕ್ತಿ ಭಾರತದ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಆದರೆ ಯುವಜನತೆ ಇತ್ತೀಚಿನ ದಿನಗಳಲ್ಲಿ  ದಾರಿ ತಪ್ಪಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತಿದ್ದಾರೆ. ಈ ನಿಟ್ಟಿನಲ್ಲಿ ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್‍ಐ ಸತೀಶ್ ಎಂ. ಪಿ. ಹೇಳಿದರು.

ಮಂಗಳವಾರ ಹೆಜಮಾಡಿಯ ಪದವಿಪೂರ್ವ ಕಾಲೇಜಿನಲ್ಲಿ ಪಡುಬಿದ್ರಿ ರೋಟರಿ ಹಾಗೂ ಜೇಸಿಐ ಪಡುಬಿದ್ರಿ ಸಹಯೋಗದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲಿ ಮೊಬೈಲ್ ಬೇಡಮಕ್ಕಳು ಮೊಬೈಲ್ ಚಾಳಿಯಿಂದ ದೂರವಿರಬೇಕು. ಮೊಬೈಲ್ ಕೊಟ್ಟು ಮಕ್ಕಳಿಗೆ ಊಟ ನೀಡುವುದನ್ನು ಪೊಷಕರೂ ಬಿಟ್ಟು ಬಿಡಬೇಕು. ಇಂದಿನ ಮಕ್ಕಳು ಟಿವಿ, ಮೊಬೈಲ್‍ಗಳೊಂದಿಗೇ ಆಟವಾಡುತ್ತಾರಲ್ಲದೇ ಅಂಗಳದಲ್ಲಿ ಆಟವಾಡುವುದನ್ನೇ ಬಿಟ್ಟಿರುವಂತಿದೆ ಎಂದ ಸತೀಶ್ ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ನಿಮ್ಮೊಂದಿಗಿರದಿದ್ದರೆ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಈಶ್ವರ್ ಎ. ಮಾತನಾಡಿದರು. ಪಡುಬಿದ್ರಿ ಠಾಣಾ ಎಎಸ್‍ಐ ದಿವಾಕರ ಸುವರ್ಣ, ಸರ್ಕಾರಿ ಪ್ರೌಢಶಾಲೆ, ಹೆಜಮಾಡಿಯ ಮುಖ್ಯ ಶಿಕ್ಷಕಿ ಸವಿತಾ ನಾಯಕ್ ಉಪಸ್ಥಿತರಿದ್ದರು. ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಹರೀಶ್ ಕುಮಾರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪಡುಬಿದ್ರಿಯ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News