×
Ad

ಹೆಬ್ರಿ ತಾಲೂಕಿಗೆ ಶೀಘ್ರವೇ ತಹಶೀಲ್ದಾರ್ ನೇಮಕಕ್ಕೆ ಆಗ್ರಹ

Update: 2018-12-04 21:14 IST

ಉಡುಪಿ, ಡಿ.4: ಜಿಲ್ಲೆಯಲ್ಲಿ ಹೆಬ್ರಿ ತಾಲೂಕಿನ ಘೋಷಣೆಯಾಗಿ 8 ತಿಂಗಳು ಕಳೆದರೂ ಅದರ ಅನುಷ್ಠಾನ ಇನ್ನೂ ಆರಂಭವಾಗಿಲ್ಲ. ಆದುದರಿಂದ ಶೀಘ್ರವೇ ಹೆಬ್ರಿ ತಾಲೂಕಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳದ ಜಿಲ್ಲಾದ್ಯಕ್ಷ ಯೋಗೀಶ್ ವಿ.ಶೆಟ್ಟಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.

ಹೆಬ್ರಿ ತಾಲೂಕಿಗೆ ಶೀಘ್ರವಾಗಿ ತಹಶಿಲ್ದಾರರ ನೇಮಕವಾಗಬೇಕು. ವಿವಿಧ ಇಲಾಖೆಗಳ ಕಾರ್ಯಾರಂಭ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ 16 ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಅವರು ಕುಮಾರಸ್ವಾಮಿ ಅವರನ್ನು ಮುಖತ: ಭೇಟಿಯಾಗಿ ಅರ್ಪಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಹೆಬ್ರಿ ತಾಲೂಕಿಗೆ ಶೀಘ್ರವಾಗಿ ತಹಶಿಲ್ದಾರರ ನೇಮಕವಾಗಬೇಕು. ವಿವಿಇಲಾಖೆಗಳಕಾರ್ಯಾರಂ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ 16 ಗ್ರಾಮಗಳಿಗೆ ಮೂಲೂತಸೌಕರ್ಯಒದಗಿಸುವಂತೆಅವರುಕುಮಾರಸ್ವಾಮಿಅವರನ್ನುಮುಖತ:ೇಟಿಯಾಗಿ ಅರ್ಪಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಶ್ರೀಕಾಂತ್ ಹೆಬ್ರಿ ಹಾಗೂ ಇತರರು ಉಪಸ್ಥಿತರಿದ್ದರು ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News