×
Ad

ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಾಸಭೆ

Update: 2018-12-04 21:17 IST

ಉಡುಪಿ, ಡಿ.4: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಇದರ 2017ನೇ ಸಾಲಿನ ವಾರ್ಷಿಕ ಮಹಾಸಭೆ ಡಿ.9ರಂದು ಬೆಳಗ್ಗೆ 10  ಗಂಟೆಗೆ ಉಡುಪಿಯ ಹೋಟೆಲ್ ಶಾರದಾ ಇಂಟರ್‌ನ್ಯಾಷನಲ್‌ನಲ್ಲಿ ನಡೆಯಲಿದೆ.

ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಬಾಗವಹಿಸಲಿರುವರು. ಮಹಾಸಭೆಯಲ್ಲಿ 2017ನೇ ವರ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿ ಸರಕಾರಿ ನೌಕರರು ಹಾಗೂ ನೌಕರರ ಮಕ್ಕಳನ್ನು, 2017ನೇ ಸಾಲಿನ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ನೌಕರರನ್ನು, 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ನೌಕರರ ಮಕ್ಕಳನ್ನು ಹಾಗೂ ನವಂಬರ್ 2017 ರಿಂದ ನವಂಬರ್ 2018ರವರೆಗೆ ನಿವೃತ್ತರಾದ ಸರ್ಕಾರಿ ನೌಕರರಿಗೆ ಸನ್ಮಾನಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 10ಕ್ಕೆ ಜ್ಞಾನಯಜ್ಞ ಲೈಪ್ ರಿಸರ್ಚ್ ಪೌಂಡೇಶನ್ ಉಡುಪಿ ಇವರಿಂದ ‘ಜೀವನ-ಶಿಕ್ಷಣ ಪರಿಚಯ’ ಈ ಬಗ್ಗೆ ಮಾಹಿತಿ ಕಾರ್ಯಗಾರ ಏರ್ಪಡಿ ಸಲಾಗಿದೆ ಎಂದು  ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News