ಡಿ. 7: ಸಾಸ್ತಾನ ಟೋಲ್‍ ಹೋರಾಟಕ್ಕೆ ಬೆಂಬಲ: ಹೆಜಮಾಡಿ ಟೋಲ್‍ ವಿರೋಧಿ ಸಮಿತಿ

Update: 2018-12-04 16:36 GMT

ಪಡುಬಿದ್ರಿ, ಡಿ.4: ಡಿಸೆಂಬರ್ 7ರಂದು ಸಾಸ್ತಾನ ಟೋಲ್‍ಗೇಟ್ ವಿರುದ್ಧ ನಡೆಯುವ ಹೋರಾಟಕ್ಕೆ ಹೆಜಮಾಡಿ ಟೋಲ್‍ವಿರೋಧಿ ಹೋರಾಟ ಸಮಿತಿ ಬೆಂಬಲ ಸೂಚಿಸಿದೆ.

ಮಂಗಳವಾರ ಪಡುಬಿದ್ರಿಯ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ಸಾಸ್ತಾನದಲ್ಲಿ ನಡೆಯುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು. ಬೇಡಿಕೆ ಈಡೇರದಿದ್ದಲ್ಲಿ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‍ವಿರೋಧಿ ಹೋರಾಟಗಾರರು ಜಂಟಿಯಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಣಯಿಸಲಾಯಿತು.

ಟೋಲ್ ಸುತ್ತಮುತ್ತಲಿನ 20 ಕಿಮೀ ವ್ಯಾಪ್ತಿಯಲ್ಲಿನ ಸ್ಥಳೀಯ ವಾಹನಗಳಿಗೆ ಸಂಪೂಣ್ ವಿಜನಾಯಿತಿ ನೀಡಬೇಕು ಎಂದು ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಎಲ್ಲಾ ಶಾಸಕರಿಗೆ ಮನವಿ ಮಾಡಿ ಆಗ್ರಹಿಸಲಾಗುವುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ 7 ದಿನಗಳ ಒಳಗಾಗಿ ಒತ್ತಡ ತರಬೇಕು ಎಂದು ಒತ್ತಾಯಿಸಲಾಯಿತು.

ಉಭಯ ಜಿಲ್ಲಾ ಟೋಲ್‍ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಈ ಹೋರಾಟವು ಜನಪರವಾಗಿದ್ದು, ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಶೇಖರ್ ಹೆಜಮಾಡಿ, ಗುಲಾಂ ಮುಹಮ್ಮದ್, ವಿಶ್ವಾಸ್ ಅಮೀನ್, ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ದಿವಾಕರ ಶೆಟ್ಟಿ, ಮಧು ಆಚಾರ್ಯ, ನವೀನ್‍ಚಂದ್ರ ಜೆ.ಶೆಟ್ಟಿ, ನವೀನ್‍ಚಂದ್ರ ಸುವರ್ಣ, ಸುಧೀರ್ ಕರ್ಕೇರ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸುಧಾಕರ ಶೆಟ್ಟಿ ಹೆಜಮಾಡಿ, ದೇವಣ್ಣ ನಾಯಕ್, ಹರೀಶ್ ಶೆಟ್ಟಿ ಪಡುಬಿದ್ರಿ, ಹಸನ್ ಬಾವಾ ಹಾಗು ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News