ಉಡುಪಿ: ಮೀನುಗಾರಿಕೆ ನಾಡದೋಣಿಗೆ ಕಲರ್ ಕೋಡಿಂಗ್
Update: 2018-12-04 22:24 IST
ಉಡುಪಿ, ಡಿ.4: ರಾಜ್ಯ ಮಟ್ಟದ ಕರಾವಳಿ ಭದ್ರತಾ ಸಮಿತಿ ಸಭೆಯಲ್ಲಿ ರಾಜ್ಯದ ಭದ್ರತೆಯ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಎಲ್ಲಾ ಮೀನುಗಾರಿಕಾ ಯಾಂತ್ರೀಕೃತ ನಾಡದೋಣಿ ಮತ್ತು ಯಾಂತ್ರೀಕೃತವಲ್ಲದ ಮೀನುಗಾರಿಕಾ ನಾಡದೋಣಿಗಳಿಗೆ 2019ರ ಮಾರ್ಚ್ ತಿಂಗಳ ಒಳಗೆ ಕಲರ್ ಕೋಡಿಂಗ್ ದೋಣಿಯ ಹಲ್‌ಭಾಗಕ್ಕೆ-ಬಿಳಿ ವತ್ತು ಪೆಂಡರ್ ಭಾಗಕ್ಕೆ-ಕಪ್ಪು ಬಣ್ಣ ಅಳ ಡಿಸುವಂತೆ ಹಾಗೂ ದೋಣಿಯ ಮುಂಭಾಗದಲ್ಲಿ ಬಲ ಮತ್ತು ಎಡಭಾಗದಲ್ಲಿ ಸ್ಪಷ್ಟವಾಗಿ ನೋಂದಾವಣೆ ಸಂಖ್ಯೆಯನ್ನು ನಮೂದಿಸುವಂತೆ ಎಲ್ಲಾ ದೋಣಿ ಮಾಲಕರುಗಳಿಗೆ ಸೂಚಿಸಲಾಗಿದೆ.
ತಪ್ಪಿದಲ್ಲಿ ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ರದ್ದುಗೊಳಿಸಲಾ ಗುವುದೆಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.