31 ಕಟ್ಟಡ ನಿರ್ಮಾಣ ಕಾರ್ಮಿಕರ ಹತ್ಯೆ

Update: 2018-12-05 14:36 GMT

ಜಯಪುರ (ಇಂಡೋನೇಶ್ಯ), ಡಿ. 5: ಇಂಡೋನೇಶ್ಯದ ಸಂಘರ್ಷಪೀಡಿತ ಪಪುವ ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳು 31 ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಓರ್ವ ಸೈನಿಕನನ್ನು ಹತ್ಯೆಗೈದಿದ್ದಾರೆ.

ಅವರ ಮೃತದೇಹಗಳನ್ನು ಪಡೆಯಲು ಭದ್ರರತಾ ಪಡೆಗಳು ಪ್ರಯತ್ನಗಳನ್ನು ನಡೆಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ನಡುಗ ಜಿಲ್ಲೆಯ ದುರ್ಗಮ ಗುಡ್ಡಗಾಡು ಗ್ರಾಮವೊಂದರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಬಂದೂಕುಧಾರಿಗಳು 24 ಕಾರ್ಮಿಕರನ್ನು ಕೊಂದರು ಎಂದು ಪಪುವ ಪೊಲೀಸ್ ವಕ್ತಾರರೊಬ್ಬರು ಹೇಳಿದರು.

ಇತರ ಎಂಟು ಮಂದಿ ಕಾರ್ಮಿಕರು ಸಮೀಪದಲ್ಲಿರುವ ಸ್ಥಳೀಯ ಸಂಸದರೊಬ್ಬರ ಮನೆಗೆ ಓಡಿ ಅಡಗಿಕೊಂಡರು. ಆದರೆ, ಸೋಮವಾರ ಅಲ್ಲಿಗೆ ಮತ್ತೆ ಬಂದ ಬಂದೂಕುಧಾರಿಗಳ ತಂಡವೊಂದು ಅವರ ಪೈಕಿ ಏಳು ಮಂದಿಯನ್ನು ಹತ್ಯೆಗೈದಿತು ಎಂದು ಪೊಲೀಸ್ ವಕ್ತಾರರು ತಿಳಿಸಿದರು.

ಓರ್ವ ಕಾರ್ಮಿಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಜಿಲ್ಲೆಯು ಪ್ರತ್ಯೇಕತಾವಾದಿಗಳ ಭದ್ರಕೋಟೆಯಾಗಿದೆ. ಈ ಬಡತನದ ವಲಯದಲ್ಲಿ ಇಂಡೋನೇಶ್ಯದ ಆಳ್ವಿಕೆಯ ವಿರುದ್ಧ ಪ್ರತ್ಯೇಕತಾವಾದಿಗಳು 50 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News