ಮಣಿಪಾಲದ ಟ್ಯಾಪ್ಮಿಗೆ ಎಎಂಬಿಎ ಮಾನ್ಯತೆ

Update: 2018-12-05 14:51 GMT

ಮಣಿಪಾಲ, ಡಿ.5: ದೇಶದ ಅಗ್ರಮಾನ್ಯ ಬಿ-ಸ್ಕೂಲ್‌ಗಳಲ್ಲಿ ಒಂದಾದ ಮಣಿಪಾಲದ ಟಿ.ಎ.ಪೈ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಟ್ಯಾಪ್ಮಿ) ಮೂರು ವರ್ಷಗಳ ಅವಧಿಗೆ ಅಸೋಸಿಯೇಷನ್ ಆಫ್ ಎಂಬಿಎ (ಎಎಂಬಿಎ) ಅಕ್ರಿಡಿಟೇಷನ್‌ನ್ನು ಪಡೆದುಕೊಂಡಿದೆ. ಟ್ಯಾಪ್ಮಿ ಈಗಾಗಲೇ ದೇಶದ ಪ್ರಮುಖ ಬ್ಯುಸಿನೆಸ್ ಸ್ಕೂಲ್‌ಗಳನ್ನು ಹೊಂದಿದ್ದು, ಅಸೋಸಿಯೇಷನ್ ಟು ಅಡ್ವಾನ್ಸ್ ಕಾಲೇಜಿಯೇಟ್ ಸ್ಕೂಲ್ಸ್ ಆಫ್ ಬ್ಯುಸಿನೆಸ್ (ಎಎಸಿಎಸ್‌ಬಿ) ಮಾನ್ಯತೆಯನ್ನೂ ಗಳಿಸಿದೆ.

ಟ್ಯಾಪ್ಮಿ ಈ ಮೂಲಕ ಎಎಂಬಿಎ ಮತ್ತು ಎಎಸಿಎಸ್‌ಬಿ ಮಾನ್ಯತೆಗಳೆರಡನ್ನೂ ಹೊಂದಿರುವ ದೇಶದ ಐದು ಅಪರೂಪದ ಅಗ್ರಶ್ರೇಣಿಯ ಬಿ-ಸ್ಕೂಲ್‌ಗಳಲ್ಲಿ ಒಂದಾದ ಹೆಗ್ಗಳಿಕೆಯನ್ನು ಪಡೆದಿದೆ. ಪಿಜಿಡಿಎಂ, ಪಿಜಿಡಿಎಂ-ಬಿಕೆಎಫ್‌ಎಸ್ ಮತ್ತು ಪಿಜಿಡಿಎಂ-ಎಚ್‌ಆರ್ ಕೋರ್ಸ್‌ಗಳಿಗೆ ಟ್ಯಾಪ್ಮಿ ಎಎಂಬಿಎ ಮಾನ್ಯತೆ ಗಳಿಸುವ ಮೂಲಕ ಹೆಗ್ಗಳಿಕೆ ಸಾಧಿಸಿದೆ.

ಟ್ಯಾಪ್ಮಿಯ ಈ ಅಪರೂಪದ ಸಾಧನೆಗಳ ಮಾಹಿತಿಯನ್ನು ಹಂಚಿಕೊಂಡ ಟ್ಯಾಪ್ಮಿ ನಿರ್ದೇಶಕ ಪ್ರೊ. ಮಧು ವೀರರಾಘವನ್, ಬೋಧಕ ಸಿಬ್ಬಂದಿಗಳ ನಿರಂತರ ಪರಿಶ್ರಮ ಮತ್ತು ವಿದ್ಯಾರ್ಥಿ ಕೇಂದ್ರಿತ ಪರಿಸರವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ನಮಗೆ ಇಂಥ ಪ್ರತಿಷ್ಠಿತ ಮಾನ್ಯತೆ ದೊರೆಯಲು ಸಾಧ್ಯವಾಗಿದೆ. ನಿರಂತರವಾದ ಶ್ರೇಷ್ಠತೆ ಮತ್ತು ನಮ್ಮ ವಿದ್ಯಾರ್ಥಿಗಳ ಯಶಸ್ಸು, ಅತ್ಯುತ್ತಮ ಮಟ್ಟದ ಸಾಧನೆ ಕಾರ್ಯಗಳಿಗೆ ಈ ಮಾನ್ಯತೆ ಪ್ರೇರಕ ಶಕ್ತಿಯಾಗಿದೆ ಎಂದರು.

70 ದೇಶಗಳಲ್ಲಿರುವ ಬ್ಯುಸಿನೆಸ್ ಸ್ಕೂಲ್‌ಗಳಲ್ಲಿ ಕೇವಲ ಶೇ.2ರಷ್ಟು ಸ್ಕೂಲ್ ಗಳು ಮಾತ್ರ ಈ ಎಎಂಬಿಎ ಮಾನ್ಯತೆಯನ್ನು ಗಳಿಸಿದ್ದು, ಭಾರತದಲ್ಲಿ ಕೇವಲ 12 ಸಂಸ್ಥೆಗಳಿಗೆ ಈ ಮಾನ್ಯತೆ ದೊರೆತಿದೆ.

ಎಎಂಬಿಎ ಮತ್ತು ಎಎಸಿಎಸ್‌ಬಿ ಮಾನ್ಯತೆಗಳಲ್ಲದೇ ಟ್ಯಾಪ್ಮಿ ಕಾರ್ಯಕ್ರಮ ಗಳಿಗೆ ಆಲ್ ಇಂಡಿಯಾ ಕೌನ್ಸಿಲ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ), ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ಮತ್ತು ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಷನ್ (ಎನ್‌ಬಿಎ) ಮಾನ್ಯತೆ ಗಳು ಸಿಕ್ಕಿರುವುದು ಟ್ಯಾಪ್ಮಿಯ ಕಿರೀಟಕ್ಕೆ ಸಿಕ್ಕಿದ ಗರಿಯಾಗಿದೆ ಎಂದು ಪ್ರೊ.ವೀರರಾಘವನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News