ರಾಜ್ಯಮಟ್ಟದ ಆಂಗ್ಲ ಭಾಷಾ ಭಾಷಣ ಸ್ಪರ್ಧೆ: ಶೆರ್ಲಿನ್ ಅಲ್ಮೇಡಾಗೆ ಪ್ರಶಸ್ತಿ
Update: 2018-12-05 21:51 IST
ಉಡುಪಿ, ಡಿ.5: ಭಾರತದ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಹಾಗೂ ಸಂವಿಧಾನ ದಿವಸವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನರು (Patriotism & Nation Building) ಕುರಿತ ಇಂಗ್ಲೀಷ್ ಭಾಷಣ ಸ್ಪರ್ಧೆಯನ್ನು ನೆಹರು ಯುವ ಕೇಂದ್ರ ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಆಯೋಜಿಸಿತ್ತು.
ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಶೆರ್‌ಲಿನ್ ಡಿಅಲ್ಮೇಡಾ ಅವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 10,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಗಳಿಸಿದ್ದಾರೆ.
ಇವರು ಉಡುಪಿ ಎಂಜಿಎಂ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಹಾಗೂ ಉಡುಪಿಯ ಮೂಡುಬೆಳ್ಳೆ ನಿವಾಸಿಯಾದ ಐವನ್ ಡಿಅಲ್ಮೇಡಾ ಹಾಗೂ ಸಮಂತಾ ಡಿಅಲ್ಮೇಡಾ ಅವರ ಪುತ್ರಿ.