ಶರೀಅತ್ ಸಮ್ಮೇಳನ: ಬಿ.ಸಿ.ರೋಡಿನಲ್ಲಿ ಲೀಡರ್ಸ್ ಮೀಟ್

Update: 2018-12-06 05:30 GMT

ಬಿ.ಸಿ.ರೋಡ್, ಡಿ.6: ಮಂಗಳೂರು ನೆಹರು ಮೈದಾನದಲ್ಲಿ ಡಿ.9ರಂದು ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿರುವ ಶರೀಅತ್ ಸಂರಕ್ಷಣಾ ರ‌್ಯಾಲಿ ಮತ್ತು ಸಮಾವೇಶದ ಯಶಸ್ಸಿಗೆ ಶ್ರಮಿಸಲು ಸಮಸ್ತದ ಸರ್ವ ಸಂಘಟನೆಗಳು ಕರೆ ನೀಡಿತು.

ಶರೀಅತ್ ಸಮ್ಮೇಳನದ ಪ್ರಯುಕ್ತ ಪಾಣೆಮಂಗಳೂರು ಸಾಗರ್ ಅಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಲೀಡರ್ಸ್ ಮೀಟ್ ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಮಸ್ತದ ವಿವಿಧ ಪೋಷಕ ಸಂಘಟನೆಯ ನಾಯಕರು ಸಮ್ಮೇಳನದ ಬಗ್ಗೆ ಚರ್ಚಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಸಮಸ್ತದ ಕೇಂದ್ರೀಯ ಮುಶಾವರ ಸದಸ್ಯ ಖಾಸಿಂ  ಉಸ್ತಾದ್ ನಾಯಕರಿಗೆ ತರಬೇತಿ ನೀಡಿ ಸದ್ಯದ ಪರಿಸ್ಥಿತಿಯಲ್ಲಿ ಭಾರತ ಎತ್ತ ಸಾಗುತ್ತಿದೆ ಎಂಬ ಭಯ ಎಲ್ಲರನ್ನು ಕಾಡ ತೊಡಗಿದೆ. ಮತಯಂತ್ರಗಳನ್ನು ಮನೆಯಲ್ಲಿ ಅಡಗಿಸಿಡುವಷ್ಟು ಕೆಟ್ಟ ಪದ್ಧತಿ ಬಂದಿದೆ. ಧ್ವನಿ ಎತ್ತಬೇಕಾದಲ್ಲಿ ಒಗ್ಗೂಡಿ ಧ್ವನಿಯೆತ್ತಿದರೆ ಮಾತ್ರ ಪರಿಣಾಮ ಬೀರಲು ಸಾಧ್ಯ ಎಂದರು.

 ಮೌಲಾನ ಎಸ್.ಬಿ.ದಾರಿಮಿ ಕೆ.ಆರ್.ಹುಸೈನ್ ದಾರಿಮಿ, ಖಾಸಿಂ ದಾರಿಮಿ ಕಿನ್ಯ, ಎಂ.ಎಸ್.ಮುಹಮ್ಮದ್ ಮಾತನಾಡಿದರು.

ಅತ್ರಾಡಿ ಖಾಝಿ ಅಧ್ಯಕ್ಷತೆ ವಹಿಸಿದ್ದರು. ಮೌಲಾನಾ ಚೊಕ್ಕಬೆಟ್ಟು ದಾರಿಮಿ ಸ್ವಾಗತಿಸಿದರು. ಪೋಷಕ ಸಂಘಟನೆಗಳ ಹಲವಾರು ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News