ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕರೀಂನಗರದ ಹೆಸರು ಬದಲಾವಣೆ: ಆದಿತ್ಯನಾಥ್

Update: 2018-12-06 06:10 GMT

ಹೈದರಾಬಾದ್, ಡಿ.6:ಒಂದು ವೇಳೆ ತೆಲಂಗಾಣದಲ್ಲಿ ಬಿಜೆಪಿ ಸರಕಾರ ರಚಿಸಿದರೆ ‘ಕರೀಂನಗರ’ ಜಿಲ್ಲೆಯನ್ನು ‘ಕರೀಂಪುರ’ಎಂದು ಬದಲಾಯಿಸಿ ಜನರ ಭಾವನೆಗೆ ಬೆಲೆ ನೀಡಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಬುಧವಾರ ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಆದಿತ್ಯನಾಥ್ ನಗರದ ಹೆಸರು ಬದಲಾಯಿಸುವ ಭರವಸೆ ನೀಡಿದರು. ಡಿ.2 ರಂದು ಹೈದರಾಬಾದ್‌ನಲ್ಲಿ ಚುನಾವಣೆ ಪ್ರಚಾರ ಮಾಡಿದ್ದ ಆದಿತ್ಯನಾಥ್, ಹೈದರಾಬಾದ್ ನಗರವನ್ನು ‘ಭಾಗ್ಯ ನಗರ’ ಎಂದು ಮರುನಾಮಕರಣಗೊಳಿಸಲು ಬಯಸುವವರು ಬಿಜೆಪಿಗೆ ಬೆಂಬಲ ನೀಡಿ ಎಂದು ಆಗ್ರಹಿಸಿದ್ದರು.

ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮುಖ್ಯಮಂತ್ರಿಯಾಗಿರುವ ಆದಿತ್ಯನಾಥ್, ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್, ಫೈಝಾಬಾದ್‌ನ್ನು ಅಯೋಧ್ಯಾ ಹಾಗೂ ಮುಘಲ್‌ಸರೈ ಜಂಕ್ಷನ್‌ನ್ನು ಪಂಡಿತ್ ದೀನ್‌ದಯಾಳ್ ಉಪಾಧ್ಯ ಜಂಕ್ಷನ್ ಎಂದು ಹೆಸರು ಬದಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News