×
Ad

ಡಿ.7-9: ತಾಜುಲ್ ಉಲಮಾ ಉರೂಸ್; ಡಿ.7ರಂದು ಉಳ್ಳಾಲದಿಂದ ಸಂದಲ್

Update: 2018-12-06 12:05 IST

ಮಂಗಳೂರು, ಡಿ.6: ಮರ್ಹೂಂ ಸೈಯದ್ ತಾಜುಲ್ ಉಲಮಾ ಅಬ್ದುರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿಯವರ 5ನೇ ಉರೂಸ್ ಡಿ.7, 8 ಮತ್ತು 9ರಂದು ಕೇರಳದ ಎಟ್ಟಿಕುಲಂನಲ್ಲಿ ನಡೆಯಲಿದೆ.

ಉರೂಸ್ ಪ್ರಯುಕ್ತ ಡಿ.7ರಂದು ಬೆಳಗ್ಗೆ 7ಕ್ಕೆ ಉಳ್ಳಾಲ ಸೈಯದ್ ಮದನಿ ಝಿಯಾರತ್ ನೊಂದಿಗೆ ಸಂದಲ್ ಜಾಥಾವು ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಸೈಯದ್ ಖುಬೈಬ್ ತಂಙಳ್ ಉಳ್ಳಾಲ, ಸಿರಾಜುದ್ದೀನ್ ಸಖಾಫಿ ಕನ್ಯಾನ ಮೊದಲಾದವರ ನೇತೃತ್ವದಲ್ಲಿ ಎಟ್ಟಿಕುಲಂಗೆ ಹೊರಡಲಿದೆ. ಆಸಕ್ತರು ಅಂದು ಬೆಳಗ್ಗೆ 6:30ಕ್ಕೆ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರಕ್ಕೆ ವಾಹನಗಳೊಂದಿಗೆ ಬಂದು ಸಹಕರಿಸುವಂತೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹಲವು ಸಾದಾತ್ ಗಳು, ಉಲಮಾ, ಉಮರಾ ನೇತಾರರು ಭಾಗವಹಿಸುವ ಈ ಉರೂಸ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News