ಹನಾನ್ ಬರುತ್ತಿದ್ದಾಳೆ-ತಾಜಾ ಮೀನಿನೊಂದಿಗೆ !
ಕೊಚ್ಚಿ,ಡಿ.6: ಹನಾನ್ ಪುನಃ ಮೀನು ಮಾರಾಟ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾಳೆ. ಗುರುವಾರ ಬೆಳಗ್ಗೆ 10 ಗಂಟೆಗೆ ತಾನು ಈ ಹಿಂದೆ ಮೀನು ಮಾರಾಟ ಮಾಡುತ್ತಿದ್ದ ತಮ್ಮನಂ ಜಂಕ್ಷನ್‍ನಲ್ಲಿ ಹನಾನ್ ಮೀನಿನೊಂದಿಗೆ ಬರುತ್ತಿದ್ದಾಳೆ. ಈ ಸಲ ಸ್ವಂತ ಏಸ್ ವಾಹನದಲ್ಲಿ ಹನಾನ್ ಮೀನು ಮಾರಾಟವನ್ನು ಆರಂಭಿಸುತ್ತಿದ್ದಾಳೆ.
ವಾಹನದಲ್ಲಿಮೀನು ಮಾರಾಟಕ್ಕೆ ಸೂಕ್ತವಾಗುವ ರೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮೀನನ್ನು ಶುಚೀಕರಿಸಿ ಬಾಕ್ಸಿನಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲಿದ್ದಾಳೆ.
‘ವೈರಲ್ ಫಿಶ್’ ಎಂಬ ಹೆಸರಿನ ಮೀನು ಮಾರಾಟವನ್ನು ನಟ ಸಲೀಂಕುಮಾರ್ ಉದ್ಘಾಟಿಸಲಿದ್ದಾರೆ. ತಮ್ಮನಂನಲ್ಲಿ ಮೀನು ಮಾರಾಟಕ್ಕೆ ಕಾರ್ಪೊರೇಷನ್ ಅನುಮತಿ ನೀಡಿದೆ. ಈ ಹಿಂದೆ ‘ಮೀನು ಮಾರಾಟ ಮಾಡುವ ಕಾಲೇಜು ವಿದ್ಯಾರ್ಥಿನಿ’ ಎಂದು ಕೇರಳದ ಪತ್ರಿಕೆಗಳು ಪ್ರಕಟಿಸಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹನಾನ್‍ಳ ವಿರುದ್ಧ ಆರೋಪಗಳ ಸುರಿಮಳೆ ನಡೆದಿತ್ತು. ಅಂತಿಮವಾಗಿ ಹನಾನ್ ಮೀನು ಮಾರುವುದನ್ನು ನಿಲ್ಲಿಸಬೇಕಾಗಿಬಂದಿತ್ತು.
ತದನಂತರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಹನಾನ್ ಈಗ ಚೇತರಿಸಿಕೊಂಡಿದ್ದು ಪುನಃ ಮೀನು ಮಾರಲು ಸಿದ್ಧತೆ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ.