2018 ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ
ಹೊಸದಿಲ್ಲಿ, ಡಿ.6: ಸಾಹಿತ್ಯ ಅಕಾಡಮಿ ಬುಧವಾರ 2018ರ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ 2017 ಹಾಗೂ 2018ರ ಭಾಷಾ ಸಮ್ಮಾನ್ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದೆ.
ಅಕಾಡಮಿ ಮಾನ್ಯತೆಯಿರುವ 24 ಭಾಷೆಗಳ ಸಾಹಿತಿಗಳಿಗೆ 2018ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಘೋಷಿಸಲಾಗಿದೆ.
ಕನ್ನಡದಲ್ಲಿ ಕೆಜಿ ನಾಗರಾಜಪ್ಪ, ತಮಿಳಿನಲ್ಲಿ ಎಸ್. ರಾಮಕೃಷ್ಣನನ್, ಸಂಸ್ಕೃತದಲ್ಲಿ ರಾಮಕಾಂತ ಶುಕ್ಲಾ, ಮಲಯಾಳಂನಲ್ಲಿ ರಮೇಶನ್ ನಾಯರ್, ಹಿಂದಿಯಲ್ಲಿ ಚಿತ್ರ ಮುದ್ಗಲ್, ಬಂಗಾಳದಲ್ಲಿ ಸಾಜಿಬ್ ಚಟ್ಟೋಪಾಧ್ಯಾಯ, ಇಂಗ್ಲೀಷ್‌ನಲ್ಲಿ ಅನೀಸ್ ಸಲೀಮ್, ಗುಜರಾತ್‌ನಲ್ಲಿ ಶರೀಫಾ ವಿಜ್ಲಿವಾಲಾ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾದ ಪ್ರಮುಖರು.
ಭಾಷಾ ಸಮ್ಮಾನ ವಿಭಾಗಗಳಲ್ಲಿ ಯೋಗೇಂದ್ರ ನಾಥ್ ಶರ್ಮಾ ಉತ್ತರ ವಲಯ, ಜಿ.ವೆಂಕಟಸುಬ್ಬಯ್ಯ ದಕ್ಷಿಣ ವಲಯ, ಗಜೇಂದ್ರ ನಾಥ್ ಪೂರ್ವ ವಲಯ ಹಾಗೂ ಶೈಲಜಾ ಬಾಪಟ್ ಪಶ್ಚಿಮ ವಲಯದಿಂದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರತಿ ಭಾಷಾ ವಿಭಾಗದ ಮೂವರು ಸದಸ್ಯರ ಜ್ಯೂರಿ ಶಿಫಾರಸಿನ ಮೇರೆಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿ ಕಾರ್ಯದರ್ಶಿ ಶ್ರೀನಿವಾಸ ರಾವ್ ಹೇಳಿದ್ದಾರೆ.
ಮುಂದಿನ ವರ್ಷದ ಜನವರಿಯಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನಿಸಲಾಗುತ್ತದೆ