ಜ.1ರ ‘ಮಹಿಳಾ ಮಹಾಗೋಡೆ’ಯ ಉದ್ದ 620 ಕಿ.ಮೀ

Update: 2018-12-06 10:00 GMT

ತಿರುವನಂತಪುರಂ, ಡಿ.6: ನವೋತ್ಥಾನ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ಹೊಸ ವರ್ಷದಲ್ಲಿ ಆಯೋಜಿಸಲಾಗುತ್ತಿರುವ ವನಿತಾ ಮದಿಲ್ (ಮಹಿಳಾ ಗೋಡೆ) ಉದ್ದ 620 ಕಿಲೋಮೀಟರ್ ಇರಲಿದೆ. ಭುಜಕ್ಕೆ ಭುಜ ಸೇರಿಸಿ ಒಂದೂವರೆ ಅಡಿ ಸ್ಥಳದಲ್ಲಿ ಒಬ್ಬಳು ನಿಂತರೆ ಇಷ್ಟು ದೂರಕ್ಕೆ 13,56,080 ಮಹಿಳೆಯರ ಅಗತ್ಯವಿದ್ದಾದೆ. ಆದರೆ ಸಂಘಟನೆಗಳು ಅಗತ್ಯವಿರುವುದಕ್ಕಿಂತ ದುಪ್ಪಟ್ಟು ಮಹಿಳೆಯರನ್ನು ಸೇರಿಸುವುದಾಗಿ ಹೇಳುತ್ತಿವೆ.

 ಕಾಸರಗೋಡಿನಿಂದ ತಿರುವನಂತಪುರಂನ ವೆಳ್ಳಯಂಬಲಂವರೆಗೆ ರಚನೆಯಾಗುವ ಗೋಡೆಗೆ 30,15,100ಮಹಿಳೆಯರು ಬೇಕಾಗುತ್ತಾರೆ.

 ಜನವರಿ ಒಂದರಂದು ಸಂಜೆ ನಾಲ್ಕು ಗಂಟೆಗೆ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿ ‘ವನಿತಾ ಮದಿಲ್’ ನಿರ್ಮಾಣವಾಗಲಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಸ್ವಲ್ಪದೂರ ಸ್ವಲ್ಪ ಬದಲಾವಣೆ ಇರಬಹುದು. ಎಲ್ಲ ಧರ್ಮ ವಿಭಾಗದವರೂ ಇದರಲ್ಲಿ ಭಾಗವಹಿಸಲಿದ್ದಾರೆ. ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಯಲಿದೆ. ಕೇರಳದಿಂದ ಹೊರಗಿನ ಲೇಖಕಿಯರು, ಸಾಂಸ್ಕøತಿಕ ಕಾರ್ಯಕರ್ತೆಯರು ಕೂಡಾ ಭಾಗವಹಿಸಲಿದ್ದಾರೆ ಎಂದು ನವೋತ್ಥಾನ ಸಮಿತಿ ಸಂಯೋಜಕ ಪುನ್ನಲ ಶ್ರೀಕುಮಾರ್ ತಿಳಿಸಿದರು.

ರೂಟ್ ಹೀಗಿದೆ:

ಮಹಿಳೆಯರ ಗೋಡೆ ಕಾಸರಗೋಡು ನಗರದಲ್ಲಿ ಆರಂಭವಾಗಲಿದೆ ಕಾಲಿಕ್ಕಡವ್-ಕಣ್ಣೂರ್- ಮಾಹಿ-ರಾಮನಾಟ್ಟುಕ್ಕರ ಮೂಲಕ ಮಲಪ್ಪುರಂವರೆಗೆ. ಪೆರಿಂದಲ್‍ಮಣ್ಣ-ಪಟ್ಟಾಂಬಿ-ಚೆರುತ್ತುರ್ತಿ-ಕರುಕುಟ್ಟಿ-ಅಂಗಮಾಲಿ-ಆಲುವ-ವೈಟ್ಟಿಲ-ಆಲಪ್ಪುಝ-ಒಚ್ಚಿರ-ಕರುನಾಗಪ್ಪಳ್ಳಿ-ಕೊಲ್ಲಂ ಮೂಲಕ ತಿರುವನಂತಪುರಂ ತಲುಪಲಿದೆ.

ವಯನಾಡ್ ಜಿಲ್ಲೆಯವರು ಕಲ್ಲಿಕೋಟೆಯಲ್ಲಿÉ, ಇಡುಕ್ಕಿಯಲ್ಲಿರುವವರು ಆಲುವದಲ್ಲಿ ಮತ್ತು ಕೋಟ್ಟಾಯಂನವರು  ಆಲಪ್ಪುಝದಲ್ಲಿ ಭಾಗವಹಿಸುತ್ತಾರೆ. ಪಾಲಕ್ಕಾಡಿನವರು ಪೆರಿಂದಲ್ ಮಣ್ಣ-ಪಟ್ಟಾಂಬಿ-ಚೆರುತ್ತುರ್ತಿಯಲ್ಲಿ ಕೋಟ್ಟಯಂ, ಪತ್ತನಂತಿಟ್ಟ ಜಿಲ್ಲೆಗಳವರು ಅರೂರ್-ಒಚ್ಚಿರ ರೂಟನ್‍ನಲ್ಲಿ ಸೇರಿಕೊಳ್ಳಲಿದ್ದಾರೆ.

ಮಹಿಳಾ ಗೋಡೆ ರಚನೆಯ ಹಿನ್ನೆಲೆಯಲ್ಲಿ ಸಂಘಟನಾ ಸಮಿತಿ ಡಿ. 11/12/13 ರಂದು ಜಿಲ್ಲಾಮಟ್ಟದಲ್ಲಿ ಅಸ್ತಿತ್ವಕ್ಕೆ ಬರಲಿವೆ. ಘೋಷಣಾ ಜಾಥ ಇರಲಿದೆ. ಮಹಿಳೆಯರ ಪಂಚಾಯತ್ ಮಟ್ಟ, ವಾರ್ಡ್‍ಮಟ್ಟದ ಸಭೆಗಳು ಡಿ. 22ರೊಳಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News