ವಿದ್ಯಾರ್ಥಿಯ ಕಿಡ್ನಿ ವೈಫಲ್ಯ: ನೆರವಿಗೆ ಮನವಿ

Update: 2018-12-06 12:31 GMT

ಮಂಗಳೂರು, ಡಿ.6: ಬಜ್ಪೆ ನಿವಾಸಿ ಇಸ್ಮಾಯೀಲ್ ಎಂಬವರ ಪುತ್ರ, ನಗರದ ಕೆಪಿಟಿ ವಿದ್ಯಾರ್ಥಿ ಸರ್ಫ್ರಾಝ್ ಇಸ್ಮಾಯೀಲ್ ಸಾದಿಕ್ (17) ದೀರ್ಘಕಾಲದ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದು, ಇದೀಗ ಕೋಯಂಬತ್ತೂರಿನ ಕೊಯಿಮೈ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಫಲವಾದ ಮೂತ್ರಪಿಂಡಕ್ಕೆ ಕಸಿಯ ಅಗತ್ಯವಿದ್ದು ಡಯಾಲಿಸಿಸ್ ಮಾಡಿಸಲಾಗುತ್ತಿದೆ. ಡಯಾಲಿಸಿಸ್‌ನಿಂದ ಸಾದಿಕ್‌ರ ದೇಹವು ಆಗಾಗ್ಗೆ ಸೋಂಕಿಗೊಳಗಾಗುತ್ತಿದೆ. ಆಸ್ಪತ್ರೆಯಲ್ಲಿ ಸಾದಿಕ್‌ರನ್ನು ನೋಡಿಕೊಳ್ಳುವುದಕ್ಕಾಗಿ ಅವರ ತಂದೆಯೂ ಕೆಲಸ ಕಳೆದುಕೊಂಡಿದ್ದಾರೆ.

ಮೂತ್ರಪಿಂಡ ಶಾಸ್ತ್ರಜ್ಞರ ಪ್ರಕಾರ ಚಿಕಿತ್ಸೆಯ ವೆಚ್ಚವು ಸುಮಾರು 8 ಲಕ್ಷ ರೂ. ಆಗಲಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ಈ ಕುಟುಂಬಕ್ಕೆ ದಾನಿಗಳ ನೆರವು ಬೇಕಾಗಿದೆ. ಆಸಕ್ತರು ದಿಲ್‌ಶಾದ್ ಇಸ್ಮಾಯೀಲ್, ಉಳಿತಾಯ ಖಾತೆ ಸಂಖ್ಯೆ: 143601011002879, ಐಎಫ್‌ಎಸ್‌ಸಿ ಸಂಖ್ಯೆ ವಿಐಜೆಬಿ 0001436, ವಿಜಯ ಬ್ಯಾಂಕ್, ಬಜ್ಪೆ ಶಾಖೆ ಇಲ್ಲಿಗೆ ನೆರವು ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ: 9342584128, 9980889282ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News