ಜಂಜಾಟದ ಜೀವನದಲ್ಲಿ ಸಾಂಸ್ಕೃತಿಕ ಚಟುವಟಿಕೆ ಅಗತ್ಯ: ಐವನ್ ಡಿಸೋಜ

Update: 2018-12-06 14:03 GMT

ಮಂಗಳೂರು, ಡಿ. 6: ಜಂಜಾಟದ ಬದುಕಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ದ.ಕ.ಜಿಲ್ಲಾಡಳಿತ, ದ.ಕನ್ನಡ ಜಿ.ಪಂ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕನ್ನಡ ಜಿಲ್ಲಾ ಶಾಖೆ ವತಿಯಿಂದ ನಗರದ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಅವರು ಉದ್ಘಾಟಿಸಿದರು.

ಸರಕಾರ ರೂಪಿಸುವ ಕಾರ್ಯಕ್ರಮಗಳು ಲಾನುಭುವಿಗಳಿಗೆ ತಲುಪಿಸುವಲ್ಲಿ ಸರಕಾರಿ ನೌಕರರು ಮಹತ್ತರ ಪಾತ್ರ ವಹಿಸುತ್ತಾರೆ. ಸರಕಾರಿ ನೌಕರರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸರಕಾರದ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಿದಾಗ ಯೋಜನೆಗಳ ಆಶಯ ಈಡೇರಲು ಸಾಧ್ಯವಾಗುತ್ತದೆ ಎಂದರು.

ಪ್ರಸ್ತುತ ಸರಕಾರಿ ನೌಕರರಲ್ಲಿ ಆತಂಕಕ್ಕೆ ಕಾರಣವಾಗಿರುವ ಹೊಸ ಪಿಂಚಣಿ ವ್ಯವಸ್ಥೆಯವಿರುದ್ದ ವಿಧಾನ ಪರಿಷತ್‌ನಲ್ಲಿ ಈಗಾಗಲೇ ಧ್ವನಿಯೆತ್ತಿದ್ದೇನೆ. ಮುಂದಿನ ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆದು ಎನ್‌ಪಿಎಸ್ ರದ್ದುಗೊಳಿಸಿ ಹಿಂದಿನ ಹಳೆ ಪಿಂಚಣಿ ವ್ಯವಸ್ಥೆಯೇ ಜಾರಿಯಾಗುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇನೆ ಎಂದವರು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕನ್ನಡ ಜಿಲ್ಲಾ ಶಾಖೆ ಅಧ್ಯಕ್ಷ ಪ್ರಕಾಶ್ ನಾಯಕ್ ಸ್ವಾಗತಿಸಿದರು.ಗೌರವ ಅಧ್ಯಕ್ಷ ಜಯರಾಮ ಪೂಜಾರಿ, ಪದಾಧಿಕಾರಿಗಳಾದ ದೇವದಾಸ್, ಶಿವಾನಂದ್, ಸೇಷಪ್ಪ , ಬಿ.ಕೆ.ಕೃಷ್ಣ, ನಾಗೇಶ್ ,ರೀಟಾ ಡೇಸಾ , ಶೆರ್ಲಿ ಸುಮಾಲಿನ್ ಉಪಸ್ಥಿತರಿದ್ದರು.

ಸರಕಾರಿ ನೌಕರರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News