ಡಿ.10: ಅಡ್ಡೂರಿನಲ್ಲಿ ಉಚಿತ ಸಾಮೂಹಿಕ ವಿವಾಹ, ಸುನ್ನೀ ಮಹಾ ಸಂಗಮ

Update: 2018-12-07 13:45 GMT

ಬಂಟ್ವಾಳ, ಡಿ. 5: ಎಸ್ಸೆಸ್ಸೆಫ್ ಅಡ್ಡೂರು ಶಾಖಾ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಬೃಹತ್ ಸುನ್ನೀ ಮಹಾ ಸಂಗಮ ಕಾರ್ಯಕ್ರಮವು ಡಿ. 10ರಂದು ಅಡ್ಡೂರು ಮಸೀದಿ ಬಳಿ ನಡೆಯಲಿದೆ.

ಅಂದು ಬೆಳಗ್ಗೆ 10ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅಡ್ಡೂರು ಬಿಜೆಎಂ ಖತೀಬ್ ಶರೀಫ್ ದಾರಿಮಿ ಉದ್ಘಾಟಿಸುವರು. ಎಸ್‍ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದು, ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ನೇತೃತ್ವ ವಹಿಸುವರು.

ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡುವರು.

ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕ ಭರತ್ ಶೆಟ್ಟಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ.ಮೋನು ಕಣಚೂರು, ಮಾಜಿ ಶಾಸಕ ಮೊಯ್ದಿನ್ ಬಾವ, ಜಿ.ಎ.ಬಾವ, ಅಡ್ಡೂರು ಬಿಜೆಎಂ ಅಧ್ಯಕ್ಷ ಟಿ. ಸೈಯದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಎಸ್ಸೆಸ್ಸೆಫ್ ಅಡ್ಡೂರು ಶಾಖಾ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಕೂಟು ಝಿಯಾರತ್‍ನ ನೇತೃತ್ವ ವಹಿಸುವರು. ಎಸ್‍ವೈಎಸ್ ಅಡ್ಡೂರು ಬ್ರಾಂಚ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಧ್ವಜಾರೋಹಣ ಗೈಯುವರು.

ಮಗ್ರಿಬ್ ನಮಾಝ್ ಬಳಿಕ ಸೈಯದ್ ತ್ವಾಹಾ ತಂಙಳ್ ಪೂಕಟ್ಟೂರು ನೇತೃತ್ವದಲ್ಲಿ "ಮಹ್‍ಳರತುಲ್ ಬದ್ರಿಯಾ" ನಡೆಯಲಿದ್ದು, ಮಾಸ್ಟರ್ ಮುಈನುದ್ದೀನ್ ಬೆಂಗಳೂರು ನಅತೇ ಶರೀಫ್ ನಡೆಸುವರು. ಸೈಯದ್ ನಿಝಾಮುದ್ದೀನ್ ಬಾಫಕೀ ತಂಙಳ್ ಕೊಯಿಲಾಂಡಿ ನೇತೃತ್ವದಲ್ಲಿ ತಾಜುಲ್ ಉಲೇಮಾ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದೆ.

ಬಳಿಕ ನಡೆಯುವ ಬೃಹತ್ ಸುನ್ನೀ ಮಹಾ ಸಂಗಮದಲ್ಲಿ ಶೈಖುನಾ ಪೆರೋಡ್ ಉಸ್ತಾದ್ ಮುಖ್ಯ ಭಾಷಣ ಮಾಡುವರು. ಇದೇ ವೇಳೆ ಎಸ್‍ವೈಎಸ್ ರಾಜ್ಯ ಕಾರ್ಯದರ್ಶಿ ಎಂಎಸ್‍ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್, ಸಚಿವ ಯು.ಟಿ.ಖಾದರ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಸಂಘಟಕ ಅಬೂಬಕರ್ ಸಿದ್ದೀಕ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News