ರಾಜ್ಯಮಟ್ಟದ ಟ್ವೆಕಾಂಡೋ ಪಂದ್ಯಾಟ: ಫ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ 12 ಪದಕ

Update: 2018-12-06 14:51 GMT

ಬಂಟ್ವಾಳ, ಡಿ. 6: ಬೆಂಗಳೂರಿನ ಯಲಹಂಕದಲ್ಲಿ ಡಿ. 1, 2 ರಂದು ನಡೆದ ಒಲಿಂಪಿಕ್ ಕ್ರೀಡೆಯಲ್ಲಿ ಮಾನ್ಯತೆ ಪಡೆಯುವ ಮೂಲಕ ವಿಶ್ವ ಮಾನ್ಯತೆ ಪಡೆದ ಟ್ವೆಕಾಂಡೋ ಕೊರಿನ್ ಮಾರ್ಷಲ್ ಆಟ್ರ್ಸ್ ಫಸ್ಟ್ ರಕ್ಷಕ್ ಕಪ್ ಟ್ವೆಕಾಂಡೋ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಬಿ.ಸಿ.ರೋಡಿನ ಕೈಕಂಬದ ಫ್ಯಾನ್ಸ್ ಅಕಾಡಮಿಯ ವಿದ್ಯಾರ್ಥಿಗಳು 12 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.

ಇಲ್ಲಿನ ವಿದ್ಯಾರ್ಥಿಗಳು 28 ಕೆ.ಜಿ. ವಿಭಾಗದಲ್ಲಿ ಅನಸ್ ಚಿನ್ನ, ಬೆಳ್ಳಿ ಪದಕ ಗೆದ್ದುಕೊಂಡರೆ, 44 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ಶಿಫಾನ್ ಚಿನ್ನ, ಕಂಚು ಪದಕ ಗೆದ್ದುಕೊಂಡಿದ್ದಾರೆ.

58 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ರಾಫಿ ಚಿನ್ನ, 20 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ಯೂಸುಫ್ ತ್ವಾಹ ಹಾಗೂ ಅಫ್ರೀದ್ ಚಿನ್ನ, 40.4 ಕೆ.ಜಿ. ವಿಭಾಗದಲ್ಲಿ ಉವೈಝ್ ಬೆಳ್ಳಿ, ಕಂಚ, 28 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ತನ್ವೀರ್ ಬೆಳ್ಳಿ ಮತ್ತು ಕಂಚು ಪದಕ, 40 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ನಿಹಾಲ್ ಬೆಳ್ಳಿ ಪದಕ ಗೆದ್ದುಕೊಂಡು ಸಾಧನೆಗೈದಿದ್ದಾರೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಇಸಾಕ್ ನಂದಾವರ ಹಾಗೂ ಇಬ್ರಾಹಿಂ ನಂದಾವರ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News