ರಾಜ್ಯಮಟ್ಟದ ಟ್ವೆಕಾಂಡೋ ಪಂದ್ಯಾಟ: ಫಿಟ್ನೆಸ್ ಜಿಂ-ಮಾರ್ಷಲ್ ಆರ್ಟ್ಸ್ ಸೆಂಟರ್ ವಿದ್ಯಾರ್ಥಿಗಳಿಗೆ ಪದಕ

Update: 2018-12-06 14:54 GMT

ಬಂಟ್ವಾಳ, ಡಿ. 6: ಬೆಂಗಳೂರಿನ ಯಲಹಂಕದಲ್ಲಿ ಡಿ. 1,2ರಂದು ನಡೆದ ಟ್ವೆಕಾಂಡೋ ಕೊರಿನ್ ಮಾರ್ಷಲ್ ಆಟ್ರ್ಸ್ ಫಸ್ಟ್ ರಕ್ಷಕ್ ಕಪ್ ಟ್ವೆಕಾಂಡೋ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಮತ್ತು ಮಾರ್ಷಲ್ ಆರ್ಟ್ಸ್ ಸೆಂಟರ್ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ 7 ಚಿನ್ನ, 2 ಬೆಳ್ಳಿ ಹಾಗೂ 5 ಕಂಚು ಸಹಿತ ಒಟ್ಟು 14 ಪದಗಳನ್ನು ಗೆದ್ದುಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ.

ಸಬ್ ಜೂನಿಯರ್ 28 ಕೆ.ಜಿ. ಫೈಟಿಂಗ್ ವಿಬಾಗದಲ್ಲಿ ಮುಹಮ್ಮದ್ ಇಶಾಮ್‍ಗೆ ಚಿನ್ನ ಹಾಗೂ ಕಲರ್ ಬೆಲ್ಟ್ ಪೂಮ್ಸೆ ವಿಭಾಗದಲ್ಲಿ ಕಂಚು, ಸಬ್ ಜೂನಿಯರ್ 30 ಕೆ.ಜಿ. ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಫಾಝಿಲ್‍ಗೆ ಚಿನ್ನ ಹಾಗೂ ಕಲರ್ ಬೆಲ್ಟ್ ಪೂಮ್ಸೆಯಲ್ಲಿ ಕಂಚು,  ಸಬ್ ಜೂನಿಯರ್ 26 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ಸಾಜಿದ್‍ಗೆ ಫೈಟಿಂಗ್‍ನಲ್ಲಿ ಚಿನ್ನ, ಸಬ್ ಜ್ಯೂನಿಯರ್ 34 ಕೆ.ಜಿ. ವಿಭಾಗದಲ್ಲಿ ಮುಹಮ್ಮದ್ ಫಝಲ್ ಎ. ಅವರಿಗೆ ಫೈಟಿಂಗ್‍ನಲ್ಲಿ ಚಿನ್ನ ಹಾಗೂ ಕಲರ್ ಬೆಲ್ಟ್ ಪೂಮ್ಸೆ ವಿಭಾಗದಲ್ಲಿ ಬೆಳ್ಳಿ ಪದಕ, ಸಬ್ ಜ್ಯೂನಿಯರ್ 32 ಕೆ.ಜಿ. ವಿಭಾಗದಲ್ಲಿ ಮುಝಮ್ಮಿರುಲ್ ಅಮೀನ್ ಅವರಿಗೆ ಚಿನ್ನ, 41 ಕೆ.ಜಿ. ಕೆಡಟ್ ವಿಬಾಗದಲ್ಲಿ ಮುಹಮ್ಮದ್ ಅಝ್ಲಾಮ್‍ಗೆ ಚಿನ್ನ, 42 ಕೆ.ಜಿ. ಸಬ್ ಜೂನಿಯರ್ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಅಯಾನ್‍ಗೆ ಚಿನ್ನ ಹಾಗೂ ಕಲರ್ ಬೆಲ್ಟ್ ಪೂಮ್ಸೆಯಲ್ಲಿ ಕಂಚು, ಸೀನಿಯರ್ 51 ಕೆ.ಜಿ. ವಿಭಾಗದಲ್ಲಿ ಸುನಿಲ್ ಮೊಗರ್ನಾಡು ಅವರಿಗೆ ಕಂಚು, 68 ಕೆ.ಜಿ. ಜ್ಯೂನಿಯರ್ ವಿಭಾಗದಲ್ಲಿ ಮುಹಮ್ಮದ್ ಸುಹೈಲ್ ವಿಟ್ಲ ಅವರಿಗೆ ಬೆಳ್ಳಿ, 21 ಕೆ.ಜಿ. ಮಿನಿ ಸಬ್ ಜ್ಯೂನಿಯರ್ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಶಾಕಿಬ್ ಸುಲ್ತಾನ್ ಅವರು ಕಂಚಿನ ಪದವನ್ನು ಗೆದ್ದುಕೊಂಡು ಸಾಧನೆ ಮೆರೆದಿರುತ್ತಾರೆ.

ಈ ಎಲ್ಲ ವಿದ್ಯಾರ್ಥಿಗಳಿಗೆ ಇಸಾಕ್ ನಂದಾವರ ಹಾಗೂ ಇಬ್ರಾಹಿಂ ನಂದಾವರ ಅವರು ತರಬೇತಿ ನೀಡಿರುತ್ತಾರೆ ಎಂದು ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಮತ್ತು ಮಾರ್ಷಲ್ ಆರ್ಟ್ಸ್ ಸೆಂಟರ್ ನಿರ್ದೆಶಕ ಇಲ್ಯಾಸ್ ಪಾಣೆಮಂಗಳೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News