ಡಿ. 9: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡಾಕೂಟ

Update: 2018-12-06 14:58 GMT

ಬಂಟ್ವಾಳ, ಡಿ. 6: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ. 9ರಂದು ಸಂಜೆಯಿಂದ ರಾತ್ರಿವರೆಗೆ 3316 ವಿದ್ಯಾರ್ಥಿಗಳಿಂದ ಹೊನಲು ಬೆಳಕಿನ ಕ್ರೀಡಾಕೂಟ ನಡೆಯಲಿದ್ದು, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಅವರು ಗುರುವಾರ ಸಂಜೆ ಕಲ್ಲಡ್ಕದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 19 ನಾನಾ ರೀತಿಯ ಕವಾಯತುಗಳು, ಪ್ರದರ್ಶನಗಳು ಇರಲಿದ್ದು, ಈ ಬಾರಿ ಸರದಾರ್ ವಲ್ಲಭಭಾಯಿ ಪಟೇಲ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೆನಪು, ಪೆÇೀಖರಣ್ ಅಣುಪರೀಕ್ಷೆಯ ಅಣಕು ಪ್ರದರ್ಶನ ಮತ್ತು ಶಬರಿಮಲೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನಾವಳಿಗಳ ಸನ್ನಿವೇಶಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಸುಮಾರು 30ಕ್ಕೂ ಅಧಿಕ ವರ್ಷಗಳಿಂದ ವಿದ್ಯಾಕೇಂದ್ರ ಕಾರ್ಯಾಚರಿಸುತ್ತಿದ್ದು, ಗುರುಕುಲ ಮಾದರಿಯ ವಿದ್ಯಾಭ್ಯಾಸ, ಭಾರತೀಯ ಸಂಸ್ಕೃತಿಯೊಂದಿಗೆ ಸಂಸ್ಕಾರವನ್ನು ಕೌಶಲಯುಕ್ತ ವಿದ್ಯಾಭ್ಯಾಸ ಮತ್ತು ಜಗತ್ತನ್ನು ಎದುರಿಸುವ ಧೈರ್ಯವನ್ನು ಒದಗಿಸುವ ಪ್ರೇರಣೆಯನ್ನು ವಿದ್ಯಾಸಂಸ್ಥೆ ನೀಡುತ್ತದೆ ಎಂದ ಅವರು, ಕ್ರೀಡಾಕೂಟವೆಂದರೆ ಸ್ಪರ್ಧೆಯಲ್ಲ. ಒಬ್ಬರಿಗೊಬ್ಬರು ಪೂರಕವಾಗಿ ಪ್ರತಿಭಾ ಪ್ರದರ್ಶನ ನೀಡುತ್ತಾರೆ. ಇವರಲ್ಲಿ 20 ವಿಕಲಚೇತನ ವಿದ್ಯಾರ್ಥಿಗಳೂ ಇದ್ದಾರೆ ಎಂದರು.

ಸಂಚಲನ, ಶಿಶುನೃತ್ಯ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ಯೋಗಾಸನ, ಚಿತ್ತಾರ, ಕೋಲ್ಮಿಂಚು ಪ್ರದರ್ಶನ, ನೃತ್ಯ ಭಜನೆ, ದೀಪಾರತಿ, ಮಲ್ಲಕಂಭ, ಘೋಷ್ ಟಿಕ್ ಟಿಕ್ ಪ್ರದರ್ಶನ, ನೃತ್ಯವೈವಿಧ್ಯ, ಚಕ್ರ ಸಮತೋಲನ, ಬೆಂಕಿ ಸಾಹಸ, ಚೆಂಡೆವಾದ್ಯ, ಕಾಲ್ಚಕ್ರ, ಕೂಪಿಕಾ, ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ರಂಗೋಲಿಯ ಚಿತ್ತಾರ, ಅಣಕು ಪ್ರದರ್ಶನಗಳು ಈ ಬಾರಿಯ ಹೈಲೈಟ್ಸ್ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್, ಪದವಿ ಕಾಲೇಜು ಉಪನ್ಯಾಸಕ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News