ಹೊಂಡಗುಂಡಿಗಳಿಂದಾಗಿ ಸಾಯುವವರ ಸಂಖ್ಯೆ ಬಹುಶ ಗಡಿಯಲ್ಲಿನ ಸಾವಿಗಿಂತಲೂ ಹೆಚ್ಚು: ಸುಪ್ರೀಂ

Update: 2018-12-06 17:38 GMT

ಹೊಸದಿಲ್ಲಿ,ಡಿ.6: ರಸ್ತೆಗಳಲ್ಲಿನ ಹೊಂಡಗುಂಡಿಗಳಿಂದಾಗಿ ಅಪಘಾತಗಳಲ್ಲಿ 2013-2017ರ ಅವಧಿಯಲ್ಲಿ 14,926 ಜನರು ಸಾವನ್ನಪ್ಪಿರುವ ಬಗ್ಗೆ ಗುರುವಾರ ಕಳವಳವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಇದು ‘ಸ್ವೀಕಾರಾರ್ಹ’ವಲ್ಲ ಎಂದು ಬಣ್ಣಿಸಿತು.

 ದೇಶಾದ್ಯಂತ ರಸ್ತೆಗುಂಡಿಗಳಿಂದಾಗಿ ಸಂಭವಿಸುತ್ತಿರುವ ಸಾವುಗಳ ಬೃಹತ್ ಸಂಖ್ಯೆ ಬಹುಶಃ ಗಡಿಗಳಲ್ಲಿ ಅಥವಾ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟವರ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ನ್ಯಾ.ಎಂ.ಬಿ.ಲೋಕೂರ್ ನೇತೃತ್ವದ ಪೀಠವು ಹೇಳಿತು. ಸಂಬಂಧಿತ ಅಧಿಕಾರಿಗಳು ರಸ್ತೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನವುದನ್ನು ಇದು ಸೂಚಿಸುತ್ತಿದೆ ಎಂದೂ ಅದು ತಿವಿಯಿತು.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಕೆ.ಎಸ್.ರಾಧಾಕೃಷ್ಣನ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಸಮಿತಿಯು ಭಾರತದಲ್ಲಿ ರಸ್ತೆಗಳಲ್ಲಿ ಹೊಂಡಗಂಡಿಗಳಿಂದಾಗಿ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಕುರಿತು ಸಲ್ಲಿಸಿರುವ ವರದಿಗೆ ಉತ್ತರಿಸುವಂತೆ ಪೀಠವು ಕೇಂದ್ರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News