ಸಮಸ್ತ ಶರೀಅತ್ ಸಮ್ಮೇಳನಕ್ಕೆ ಪುತ್ತೂರಿನಿಂದ 10 ಸಾವಿರ ಮಂದಿ ಭಾಗಿ: ಅಬೂಬಕರ್ ಮುಲಾರ್

Update: 2018-12-07 11:45 GMT

ಪುತ್ತೂರು, ಡಿ.7: ಮಂಗಳೂರಿನಲ್ಲಿ ಡಿ.9ರಂದು ನಡೆಯಲಿರುವ ಸಮಸ್ತ ಶರೀಅತ್ ಸಂರಕ್ಷಣಾ ರ್ಯಾಲಿ ಮತ್ತು ಸಮ್ಮೇಳನದಲ್ಲಿ ಪುತ್ತೂರು ವಲಯದಿಂದ 10 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮಲಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

‘ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಕೈ ಜೋಡಿಸೋಣ’ ಎಂಬ ಘೋಷಣೆಯೊಂದಿಗೆ ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರಿನಿಂದ ಗರಿಷ್ಠ ಪ್ರಮಾಣದಲ್ಲಿ ಜನರು ಭಾಗವಹಿಸಲಿದ್ದಾರೆ.

ಅಪರಾಹ್ನ 2.30ಕ್ಕೆ ಮಂಗಳೂರು ಜ್ಯೋತಿ ವೃತ್ತದ ಬಳಿಯಿಂದ ನೆಹರೂ ಮೈದಾನದ ತನಕ ರ್ಯಾಲಿ ನಡೆಯಲಿದ್ದು, ವಿವಿಧ ಗಣ್ಯರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನೆಹರೂ ಮೈದಾನದಲ್ಲಿ ಶರೀಅತ್ ಸಂರಕ್ಷಣಾ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತದ ಅಧ್ಯಕ್ಷ ಸೈಯದ್ ಜಿಪ್ರಿ ಮುತ್ತುಕೋಯ ತಂಙಳ್, ಪ್ರಧಾನ ಕಾರ್ಯದರ್ಶಿ ಶೈಖುನಾ ಜಾಮಿಯ ಪ್ರೊ.ಅಲಿಕುಟ್ಟಿ ಮುಸ್ಲಿಯಾರ್, ಶೈಖುನಾ ಎಂ.ಟಿ ಉಸ್ತಾದ್, ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಸೈಯದ್ ಅಲಿ ತಂಙಳ್ ಕುಂಬೋಳ್, ಸೈಯದ್ ಝೈನುಲ್ ಆಬಿದೀನ್ ತಂಙಳ್, ಶೈಖುನಾ ಮಿತ್ತಬೈಲು ಉಸ್ತಾದ್, ಶೈಖುನಾ ಖಾಝಿ ತ್ವಾಖಾ ಉಸ್ತಾದ್, ಶೈಖುನಾ ಖಾಸಿಂ ಉಸ್ತಾದ್, ಅಡ್ವಕೇಟ್ ಓನಂಪಳ್ಳಿ ಮುಹಮ್ಮದ್ ಫೈಝಿ, ಅಬ್ದುಸ್ಸಮದ್ ಪೂಕೋಟೂರು, ಹಝ್ರತ್ ನಝೀರ್ ಅಝ್ಹರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶರೀಅತ್ ಸಮ್ಮೇಳನ ಪುತ್ತೂರು ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ದಾರಿಮಿ, ಕೋಶಾಧಿಕಾರಿ ಹಾಜಿ ಅಬ್ದುಲ್ ಖಾದರ್ ಹಿರಾ, ವಿಖಾಯ ಉಪಾಧ್ಯಕ್ಷ ಇಬ್ರಾಹೀಂ ಕಡವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News