ಉಡುಪಿ: ದೃಷ್ಟಿದೋಷ ಉಳ್ಳವರಿಗೆ ತರಬೇತಿ
Update: 2018-12-07 22:43 IST
ಉಡುಪಿ, ಡಿ.7: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ಅನುಷ್ಠಾನಗೊಳಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಇಲ್ಲಿ ಪ್ರತಿ ರವಿವಾರ ದೃಷ್ಟಿದೋಷ ಉಳ್ಳವರಿಗೆ ಸ್ಥಳ ಪರಿಜ್ಞಾನ, ಚಲನವಲನ ತರಬೇತಿ ಮತ್ತು ಬ್ರೈಲ್‌ಲಿಪಿ ತರಬೇತಿಯನ್ನು ನೀಡಲಾಗುತ್ತದೆ. ಅಲ್ಪಮತ್ತು ಪೂರ್ಣ ದೃಷ್ಠಿದೋಷವುಳ್ಳ ವಿಕಲಚೇತನರು ಇದರ ಸದುಪ ಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಈ ಕುರಿತು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 820-2533322, 9164276061ನ್ನು ಅಥವಾ ಸಂಸ್ಥೆಯನ್ನು ಸಂಪರ್ಕಿಸುವಂತೆ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.