​ಅರ್ಚಕರಿಗೆ ಹಲ್ಲೆ ಪ್ರಕರಣ: ದೂರು ಪ್ರತಿದೂರು ದಾಖಲು

Update: 2018-12-07 17:18 GMT

ಬ್ರಹ್ಮಾವರ, ಡಿ.7: ಹೊಸೂರು ಗ್ರಾಮದ ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ರಾಮಕೃಷ್ಣ ಅಡಿಗ ಹಾಗೂ ಶ್ರೀಕಾಂತ ಎಂಬವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ರಾಮಕೃಷ್ಣ ಅಡಿಗ ಹಾಗೂ ಶ್ರೀಕಾಂತ ದೇವಸ್ಥಾನದ ಬಳಿ ಪೂಜಾ ಕಾರ್ಯ ಮಾಡುವಾಗ ಸುಗ್ಗಿ ಸುಧಾಕರ ಶೆಟ್ಟಿ, ನವೀನ್ ಪುತ್ರನ್, ತಡಾಲು ಸುರೇಶ ಶೆಟ್ಟಿ, ಕಂಗಿಬೆಟ್ಟು ಬಾಲಕೃಷ್ಣ ಶೆಟ್ಟಿ ಮತ್ತು ಇತರ 3-4 ಮಂದಿ ಬಂದು ಮೊಬೈಲ್ ಕಸಿದು ಕೊಂಡು ಹಲ್ಲೆ ಮಾಡಿ ಬಟ್ಟೆ ಎಳೆದು ಅವಮಾನ ಮಾಡಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಸುಮಾರು ಆರು ತಿಂಗಳ ಹಿಂದೆ ದೇವಸ್ಥಾನದ ಜೀರ್ಣೋದ್ದಾರ ಮಂಡಳಿ ಅಧ್ಯಕ್ಷರಾಗಿರುವ ಸುಗ್ಗಿ ಸುಧಾಕರ ಲೆಕ್ಕ ಸರಿಯಾಗಿ ನೀಡದ ಕಾರಣ ಅವರ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲು ಮಾಡಿರುವುದೆ ಈ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿದೂರು ದಾಖಲು

ಪರಿಶಿಷ್ಟ ಜಾತಿಗೆ ಸೇರಿದ ರಾಘವೇಂದ್ರ ಬೇಳಂಜೆ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಗೆ ಹೋದಾಗ ಅರ್ಚಕರಾದ ರಾಮಕೃಷ್ಣ ಅಡಿಗ ಜಾತಿ ನಿಂದನೆ ಮಾಡಿ ದೇವರ ತೀರ್ಥ ಕೊಡಲು ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಅಲ್ಲಿಯೇ ಇದ್ದ ಶ್ರೀಕಾಂತ್ ಮತ್ತು ಶಿವಕುಮಾರ್ ಬಂದು ರಾಘವೇಂದ್ರರ ಕುತ್ತಿಗೆಗೆ ಕೈ ಹಾಕಿ, ಕೆನ್ನೆಗೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕುತ್ತಿಗೆಯಲ್ಲಿದ್ದ 1.5 ಪವನಿನ ಚಿನ್ನದ ಸರವನ್ನು ಕಸಿದು ಕೊಂಡಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News