×
Ad

ಕಡೇಶಿವಾಲಯ: ಮೀಲಾದ್ ಕಾರ್ಯಕ್ರಮ, ವಾರ್ಷಿಕ ಕುತುಬಿಯ್ಯತ್ ನೇರ್ಚೆ

Update: 2018-12-07 23:57 IST

ಬಂಟ್ವಾಳ, ಡಿ. 7: ಬದ್ರಿಯಾ ಮಸ್ಜಿದ್ ಹಾಗೂ ಇಝ್ಝತ್ತುಲ್ ಇಸ್ಲಾಂ ಮದರಸ ಪಟೀಲ ಕಡೇಶಿವಾಲಯ ಇದರ ವತಿಯಿಂದ 10ನೇ ವರ್ಷದ ಮೀಲಾದ್ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು.

ಅಜಿಲಮೊಗರು ಜುಮಾ ಮಸೀದಿಯ ಮಾಜಿ ಖತೀಬ್ ಹಾಜಿ ಅಬ್ದುಲ್ ಹಮೀದ್ ಮದನಿ ದುವಾಶಿರ್ವಚನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಟೀಲ ಇಝ್ಜತ್ತುಲ್ ಇಸ್ಲಾಂ‌ ಮದರಸದ ಮುದರ್ರಿಸ್ ಹಾಜಿ ಮುಹಮ್ಮದ್ ರಫೀಕ್ ಮದನಿ ಉದ್ಘಾಟನೆ ಮಾಡಿ, ಅಜಿಲಮೊಗರು ಜುಮಾ ಮಸೀದಿಯ ಮುದರ್ರಿಸ್ ಪಿ ಎಸ್ ತ್ವಾಹ ಸಾಹದಿ ಅಲ್ ಅಫ್-ಲಲಿ ಪ್ರಭಾಷಣಗೈದರು.

ಈ ಸಂಧರ್ಭ ಮದರಸದ ಮಕ್ಕಳಿಂದ‌ ಮದ್ ಹ್ ಗೀತೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಪಾರ್ಪಕಜೆ ವಹಿಸಿದ್ದರು. ಸುಲೈಮಾನ್ ಕಜೆ ಸ್ವಾಗತಿಸಿ, ಝೀಯಾನ್ ಪಟ್ಲ ಕಾರ್ಯಮವನ್ನು ನಿರೂಪಿಸಿದರು.

ಡಿ.8 ರಂದು ತಲಚೇರಿ ಪಾರ್ಪಕಜೆಯ ಅಬೂಬಕ್ಕರ್ ಸಿದ್ದೀಕ್ ಪೈಝಿ ಹಾಗೂ ಡಿ.9 ರಂದು ಗಡಿಯಾರ ಜುಮಾ ಮಸೀದಿಯ ಮುದರ್ರಿಸ್ ಟಿ.ಪಿ. ಜಮಾಲುದ್ದೀನ್ ದಾರಿಮಿಯಿಂದ ಪ್ರಭಾಷಣ ಮತ್ತು 27ನೇ ವಾರ್ಷಿಕ ಕುತುಬಿಯತ್ ನೇರ್ಚೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News