ನೆಟ್ಟಣ, ಬಿಳಿನೆಲೆಯಲ್ಲಿ ಕಾಡಾನೆ ಹಾವಳಿ

Update: 2018-12-08 08:23 GMT

ಕಡಬ, ಡಿ.8: ಕಳೆದ ಕೆಲವು ದಿನಗಳಿಂದ ನಾಡಿನಿಂದ ದೂರ ಉಳಿದಿದ್ದ ಕಾಡಾನೆಗಳು ಶುಕ್ರವಾರ ಮತ್ತೆ ನಾಡಿಗೆ ಲಗ್ಗೆ ಇಟ್ಟಿದ್ದು, ನೆಟ್ಟಣ, ಬಿಳಿನೆಲೆ ಪರಿಸರ ನಿವಾಸಿಗಳು ಭಯಭೀತರಾಗಿದ್ದಾರೆ.

ನೆಟ್ಟಣ ಪೇಟೆಯಲ್ಲಿನ ಅಬ್ದುಲ್ ರಹಿಮಾನ್ ಹಾಜಿ ಎಂಬವರ ಮನೆಯ ಪಕ್ಕದ ತೋಟದ ಬೇಲಿಯನ್ನು ಧ್ವಂಸಗೊಳಿಸಿರುವ ಕಾಡಾನೆ ತೆಂಗಿನ ಮರವನ್ನು ಹಾನಿಗೆಡವಿದೆ. ಇನ್ನೊಂದೆಡೆ ಬಿಳಿನೆಲೆಯಲ್ಲೂ ಕಾಡಾನೆಯ ಪುಂಡಾಟ ಜೋರಾಗಿದ್ದು, ಮನೆಯೊಂದರ ತಡೆಗೋಡೆಯನ್ನೇ ಪುಡಿಗಟ್ಟಿದೆ. ಬಿಳಿನೆಲೆ ಶಾಲೆಯ ವಿದ್ಯಾರ್ಥಿಗಳು ನಿನ್ನೆ ರಾತ್ರಿ ಪ್ರವಾಸ ಹೊರಟಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಪೋಷಕರೋರ್ವರು ಶಾಲೆಗೆ ತೆರಳಿ ಹಿಂದಿರುಗುತ್ತಿದ್ದಾಗ ಕಾಡಾನೆ ಅಟ್ಟಿಸಿಕೊಂಡು ಹೋಗಿದೆ ಎಂದು ತಿಳಿದುಬಂದಿದೆ. ಜನನಿಬಿಡ ಪ್ರದೇಶಕ್ಕೂ ಕಾಡಾನೆ ಲಗ್ಗೆ ಇಟ್ಟಿರುವುದು ಪರಿಸರದ ಜನರ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News