×
Ad

ವಿಷನ್ ಟ್ಯಾಲೆಂಟ್-2k18: ಸಮಾರೋಪ ಸಮಾರಂಭ

Update: 2018-12-08 18:24 IST

ಮಂಗಳೂರು, ಡಿ. 8: ದಾರುನ್ನೂರ್ ಇಸ್ಲಾಮಿಕ್ ಅಕಾಡಮಿ ಕಾಶಿಪಟ್ಣದಲ್ಲಿ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಾರುನ್ನೂರ್ ಸಭಾಂಗಣದಲ್ಲಿ ಶೈಖುನಾ ತ್ವಾಕ ಉಸ್ತಾದ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಹುಸೈನ್ ರಹ್ಮಾನಿ ಉದ್ಘಾಟಿಸಿದರು. ಡಿ.2 ರಿಂದ 5 ರ ತನಕ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ  ಪ್ರದರ್ಶನವನ್ನು ನಡೆಸಲಾಯಿತು. ದಾರುನ್ನೂರ್ ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್ ಫ್ಲವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಕಾರ್ಯದರ್ಶಿಗಳಾದ ಸಮದ್ ಹಾಜಿ, ಹಾಜಿ ರಿಯಾಝುದ್ದೀನ್ ಬಂದರ್, ಜನರಲ್ ಮಾನೇಜರ್ ಹಾಸ್ಕೊ ಅಬ್ದುಲ್ ರಹಿಮಾನ್ ಹಾಜಿ, ಸದಸ್ಯರುಗಳಾದ ಅದ್ದು ಹಾಜಿ, ಶಾಹುಲ್ ಹಮೀದ್ ಹಾಜಿ ಮೆಟ್ರೋ, ನೌಶಾದ್ ಹಾಜಿ ಸುರಲ್ಪಾಡಿ, ಶಿಕ್ಷಕ ರಕ್ಷಕ ಸಮಿತಿ ಕಾರ್ಯದರ್ಶಿ ಹಸನ್ ಕುಟ್ಟಿ, ಉಪಾಧ್ಯಕ್ಷ ಅಹ್ಮದ್ ಹುಸೈನ್ ಗಂಟಾಲ್ಕಟ್ಟೆ, ಕೋಶಾಧಿಕಾರಿ ಯಾಕೂಬ್ ಪೆರಿಂಜೆ, ದಾರುನ್ನೂರ್ ಹಿತೈಷಿ ಅಬ್ದುಲ್ ರಹಿಮಾನ್ ಮಂಗಳೂರು, ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.

ಹಾಜಿ ಅಬ್ದುಲ್ ರಝಾಕ್ ಬಿ.ಸಿ ರೋಡ್ ಅವರನ್ನು  ತ್ವಾಕ ಉಸ್ತಾದ್ ಸನ್ಮಾನಿಸಿದರು. ಮುಈನುದ್ದೀನ್ ಚಿಸ್ತಿ ಹುದವಿ ಕಾರ್ಯಕ್ರಮವನ್ನು ನಿರೂಪಿಸಿದರು.  ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ತ್ವಾಹಾ ಹುದವಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News