×
Ad

ಬಜೆ ವೆಂಟೆಡ್ ಡ್ಯಾಮ್‌ಗೆ ಶಾಸಕರ ಭೇಟಿ; ಪರಿಶೀಲನೆ

Update: 2018-12-08 22:06 IST

ಉಡುಪಿ, ಡಿ.8: ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಸ್ವರ್ಣ ನದಿಗೆ ಬಜೆ ಮತ್ತು ಶಿರೂರು ವೆಂಟೆಡ್ ಡ್ಯಾಂ ಪ್ರದೇಶಗಳಿಗೆ ಶಾಸಕ ಕೆ. ರಘುಪತಿ ಭಟ್ ಅವರು ನಗರಸಭಾ ಸದಸ್ಯರ ಜೊತೆಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಕುರಿತು ಪರಿಶೀಲನೆ ನಡೆಸಿದರು.

 ಬಜೆ ಮತ್ತು ಶಿರೂರು ಅಣೆಕಟ್ಟು ಪ್ರದೇಶಕ್ಕೆ ತೆರಳಿ ಕುಡಿಯುವ ನೀರಿನ ಗುಣಮಟ್ಟ ಮತ್ತು ಮುಂದೆ ಬರಬಹುದಾದ ನೀರಿನ ಅಭಾವದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮುಂದಿನ ದಿನಗಳಲ್ಲಿ ನೀರಿನ ಅಭಾವ ಕಂಡುಬರುವ ಸಮಯದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಅವರು ಸಮಾಲೋಚನೆ ನಡೆಸಿದರಲ್ಲದೇ ಅಧಿಕಾರಿಗಳಿಗೆ ಸೂಚನೆಗಳನ್ನೂ ನೀಡಿದರು.

ನೀರಿನ ಪ್ರಮಾಣವನ್ನು ಹೆಚ್ಚಿಸಲು ಅಣೆಕಟ್ಟಿನಲ್ಲಿ ಒಂದೂವರೆ ಮೀಟರ್ ನ ಬಂಡ್‌ನ್ನು ನಿರ್ಮಿಸಿ ನೀರು ಶೇಖರಣೆ ಅಧಿಕಗೊಳಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತಕ ಗಣೇಶ್, ಸಮುದಾಯ ಸಂಘಟನಾಧಿಕಾರಿ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News