ಫೇಸ್‌ಬುಕ್‌ಗೆ 81.2 ಕೋಟಿ ರೂ. ದಂಡ !

Update: 2018-12-08 17:50 GMT

ರೋಮ್ (ಇಟಲಿ), ಡಿ. 8: ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸದೆ ಬಳಕೆದಾರರ ದತ್ತಾಂಶಗಳನ್ನು ಮಾರಾಟ ಮಾಡಿರುವುದಕ್ಕಾಗಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ಗೆ 10 ಮಿಲಿಯ ಯುರೋ (ಸುಮಾರು 81.2 ಕೋಟಿ ರೂಪಾಯಿ) ದಂಡ ವಿಧಿಸಿರುವುದಾಗಿ ಇಟಲಿ ಶುಕ್ರವಾರ ಹೇಳಿದೆ.

ಬಳಕೆದಾರರು ನೀಡುವ ಮಾಹಿತಿಗಳನ್ನು ಹೇಗೆ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಅವರಿಗೆ ತಿಳಿಸದೆ ‘ಸೈನ್ ಅಪ್’ ಮಾಡುವಂತೆ ಅವರನ್ನು ತಪ್ಪುದಾರಿಗೆಳೆಯಲಾಗುತ್ತದೆ ಎಂಬುದಾಗಿ ಇಟಲಿಯ ಸಕ್ಷಮ ಪ್ರಾಧಿಕಾರ ಎಸಿಜಿಎಂ ಹೇಳಿದೆ ಹಾಗೂ ಒಟ್ಟು 10 ಮಿಲಿಯ ಯುರೋ ಮೊತ್ತದ ಎರಡು ದಂಡಗಳನ್ನು ವಿಧಿಸಿದೆ.

ಬಳಕೆದಾರರ ಮಾಹಿತಿಗಳನ್ನು ಮೂರನೇ ಪಕ್ಷದ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಹಸ್ತಾಂತರಿಸಲು ಫೇಸ್‌ಬುಕ್ ಅನುಚಿತ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News