ಹೆದರ್ ನೋವರ್ಟ್ ಅಮೆರಿಕದ ಮುಂದಿನ ವಿಶ್ವಸಂಸ್ಥೆ ರಾಯಭಾರಿ ಟ್ರಂಪ್ ಘೋಷಣೆ

Update: 2018-12-08 17:59 GMT

ವಾಶಿಂಗ್ಟನ್, ಡಿ. 8: ಮುಂದಿನ ಅಟಾರ್ನಿ ಜನರಲ್ ಮತ್ತು ವಿಶ್ವಸಂಸ್ಥೆಗೆ ಅಮೆರಿಕದ ಮುಂದಿನ ರಾಯಭಾರಿಯನ್ನು ಆರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.

1990ರ ದಶಕದಲ್ಲಿ ಮಾಜಿ ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯು. ಬುಶ್ ಆಡಳಿತದಲ್ಲಿ ಅಟಾರ್ನಿ ಜನರಲ್ ಆಗಿದ್ದ ವಿಲಿಯಮ್ ಬರ್‌ರನ್ನು ನೂತನ ಅಟಾರ್ನಿ ಜನರಲ್ ಆಗಿ ನೇಮಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಅವರು ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿರುವ ಜೆಫ್ ಸೆಶನ್ಸ್‌ರ ಸ್ಥಾನವನ್ನು ತುಂಬಲಿದ್ದಾರೆ.

ವಿಶ್ವಸಂಸ್ಥೆಗೆ ಅಮೆರಿಕದ ನೂತನ ರಾಯಭಾರಿಯಾಗಿ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್‌ರನ್ನು ನೇಮಿಸುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.

‘ಫಾಕ್ಸ್ ನ್ಯೂಸ್’ ಚಾನೆಲ್‌ನ ಮಾಜಿ ನಿರೂಪಕಿಯಾಗಿರುವ ನೋವರ್ಟ್, ನಿಕ್ಕಿ ಹೇಲಿಯ ಸ್ಥಾನವನ್ನು ತುಂಬಲಿದ್ದಾರೆ. ನಿಕ್ಕಿ ಹೇಲಿ ಈ ವರ್ಷದ ಕೊನೆಯಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News