ಹಿರಿಯ ಪತ್ರಕರ್ತ ಮಾಧವ ಆಚಾರ್ಯ ನಿಧನ
Update: 2018-12-09 20:12 IST
ಉಡುಪಿ, ಡಿ.9: ಯುಎನ್‌ಐ ಸುದ್ದಿ ಸಂಸ್ಥೆಯ ನಿವೃತ್ತ ಉಡುಪಿ ಜಿಲ್ಲಾ ವರದಿಗಾರ ಮಾಧವ ಆಚಾರ್ಯ (67) ಅಲ್ಪಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಇಂದ್ರಾಳಿ ಪತ್ರಕರ್ತರ ಕಾಲನಿಯಲ್ಲಿರುವ ಸ್ವಗೃಹದಲ್ಲಿ ನಿಧನ ರಾದರು.
ಯುಎನ್‌ಐ ಮೂಲಕ ಮಾಧ್ಯಮ ಕ್ಷೇತ್ರ ಪ್ರವೇಶಿಸಿದ ಇವರು ಸುಮಾರು 30 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರು. ಈ ಸಂಸ್ಥೆಯಲ್ಲಿ ಮೈಸೂರು ಮತ್ತು ಮಣಿಪಾಲದಲ್ಲಿ ಸೇವೆ ಸಲ್ಲಿಸಿದ್ದ ಅವರು, ಬಳಿಕ ದ.ಕ. ಮತ್ತು ಉಡುಪಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿ, 2012ರಲ್ಲಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.