ವಿಟ್ಲ: ಅಲ್‍ಖೈರ್ ಮಹಿಳಾ ಶರೀಯತ್ ಕಾಲೇಜುನಲ್ಲಿ ಮೀಲಾದ್ ಫೆಸ್ಟ್

Update: 2018-12-10 13:15 GMT

ಬಂಟ್ವಾಳ, ಡಿ. 10: ವಿಟ್ಲದ ಮೇಗಿನಪೇಟೆ ಅಲ್‍ಖೈರ್ ಮಹಿಳಾ ಶರೀಯತ್ ಕಾಲೇಜಿನ ವತಿಯಿಂದ ವಿದ್ಯಾರ್ಥಿನಿಗಳ ಮೀಲಾದ್ ಫೆಸ್ಟ್-2018 ಕಾಲೇಜು ವಠಾರದಲ್ಲಿ ಸೋಮವಾರ ನಡೆಯಿತು.

ಕಾಲೇಜು ಪ್ರಾಂಶುಪಾಲ ಅಬ್ದುರ್ರಹ್ಮಾನ್ ಫೈಝಿ ಪರ್ತಿಪ್ಪಾಡಿ ದುಆ ಆಶೀರ್ವಚನ ನೀಡಿದರು. ಕಾಲೇಜಿನ ಅಧ್ಯಕ್ಷ ಇಬ್ರಾಹಿಂ ಮೇಗಿನಪೇಟೆ ಅಧ್ಯಕ್ಷತೆ ವಹಿಸಿದ್ದರು.

ಚೆರುವತ್ತೂರು ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಬಶೀರ್ ಬಾಖವಿ ಉದ್ಘಾಟಿಸಿದರು. ಉಪನ್ಯಾಸಕ ಇಬ್ರಾಹಿಂ ಫೈಝಿ, ಆಡಳಿತ ಸಮಿತಿ ಸದಸ್ಯರಾದ ಶರೀಫ್ ಮೂಸಾ ಕುದ್ದುಪದವು, ರಫೀಕ್ ಪೊನ್ನೋಟ್ಟು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿ ನಡೆಯಿತು. 

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಕೀಲ ನೋಟರಿ ಅಬೂಬಕರ್ ವಿಟ್ಲ ಅವರು, ಪ್ರವಾದಿ ಅವರ ಜೀವನ ಹಾಗೂ ಸಂದೇಶವನ್ನು ನೆನೆಪಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ವಿವಿಧ ಸ್ಪಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ಉಪನ್ಯಾಸಕ ಅಬ್ಬಾಸ್ ದಾರಿಮಿ, ಆಡಳಿತ ಸಮಿತಿ ಸದಸ್ಯರಾದ ಇಬ್ರಾಹಿಂ ಹಾಜಿ ಪೊನ್ನೋಟ್ಟು, ಮುಸ್ತಫಾ ಖಲೀಲ್, ಮಹಮ್ಮದ್ ಎಎಸ್‍ಮಾರ್ಟ್, ಹನೀಫ್ ಅರಿಯಮೂಲೆ, ನೌಸಿನ್ ಬದ್ರಿಯಾ, ಹಮೀದ್ ಹಾಜಿ ಕುದ್ದುಪದವು, ಮುಹಮ್ಮದ್ ಅಲಿ ವಿಟ್ಲ ಉಪಸ್ಥಿತರಿದ್ದರು. 

ವ್ಯವಸ್ಥಾಪಕ ಹಕೀಂ ಅರ್ಶದಿ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಸಫ್ವಾನ್ ಮುಹಮ್ಮದ್ ಮೇಗಿನಪೇಟೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News