×
Ad

ಉಪಗವರ್ನರ್ ವಿರಾಲ್ ಆಚಾರ್ಯ ರಾಜೀನಾಮೆ ವದಂತಿ: ಆರ್‌ಬಿಐ ಪ್ರತಿಕ್ರಿಯೆ

Update: 2018-12-10 22:06 IST

ಮುಂಬೈ, ಡಿ.10: ಊರ್ಜಿತ್ ಪಟೇಲ್ ರಾಜೀನಾಮೆ ಬೆನ್ನಲ್ಲೇ ರಿಸರ್ವ್ ಬ್ಯಾಂಕ್‌ನ ಉಪಗವರ್ನರ್ ವಿರಾಲ್ ಆಚಾರ್ಯ ಕೂಡಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಇದನ್ನು ನಿರಾಕರಿಸಿದೆ.

‘‘ಉಪಗವರ್ನರ್ ವಿರಾಲ್ ಆಚಾರ್ಯ ಕೂಡಾ ಪದತ್ಯಾಗ ಮಾಡಲಿದ್ದಾರೆಂಬ ವರದಿಗಳು ಆಧಾರರಹಿತ ಹಾಗೂ ಸರಿಯಾದುದಲ್ಲ’’ ಎಂದು ಆರ್‌ಬಿಐ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳೊಳಗೆ ವಿರಾಲ್ ಆಚಾರ್ಯ ಕೂಡಾ ಸ್ಥಾನ ತ್ಯಜಿಸಲಿದ್ದಾರೆಂಬ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.

ವಿರಾಲ್ ಆಚಾರ್ಯ ಅವರು ಅಕ್ಟೋಬರ್ 26ರಂದು ಆರ್ ಬಿಐನ ಸ್ವಾಯತ್ತತೆಯನ್ನು ಕಾಪಾಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News